ಚಂಡೀಗಢ: 41 ಸಾವಿರ ಕೋಟಿ ರುಪಾಯಿ ಮೌಲ್ಯದ ರಾಫೆಲ್ ಡೀಲ್ ನಲ್ಲಿ ಭಾರತ ನಿರ್ದಿಷ್ಟ ಸುಧಾರಣೆಗಳನ್ನು ಮಾಡಿದೆ ಎಂದು ನರೇಂದ್ರ ಮೋದಿ ಸರ್ಕಾರ ಸುಳ್ಳು ಹೇಳುತ್ತಿರುವುದಾಗಿ ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಭಾರತದ ನಿರ್ದಿಷ್ಟ ಸುಧಾರಣೆಗಳು ಎನ್ ಡಿಎ ಡೀಲ್ ಮತ್ತು ಯುಪಿಎ ಡೀಲ್ ಎರಡರಲ್ಲೂ ಒಂದೇ ಆಗಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲ ಅವರು ಒತ್ತಾಯಿಸಿದ್ದಾರೆ.
ಪ್ರತಿ ಯುದ್ಧ ವಿಮಾನದ ಸುಧಾರಣೆಯ ದರದ ಬಗ್ಗೆ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಪ್ರತಿ ವಿಮಾನಕ್ಕೆ 526 ಕೋಟಿ ರುಪಾಯಿ ಇದ್ದ ಬೆಲೆ 1670 ಕೋಟಿ ರುಪಾಯಿ ಏರಿಕೆಯಾಗಿದ್ದು ಹೇಗೆ? ಎಂದು ಸುರ್ವೇವಾಲ ಅವರು ಪ್ರಶ್ನಿಸಿದ್ದಾರೆ.
ರಾಫೆಲ್ ಡೀಲ್ ನಿಂದಾಗಿ ಸಾರ್ವಜನಿಕರ 41 ಸಾವಿರ ಕೋಟಿ ರುಪಾಯಿ ನಷ್ಟವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ದೂರಿದ್ದಾರೆ.