ತಿರುವಣ್ಣಮಲೈ: ಯೋಗೇಂದ್ರ ಯಾದವ್ ವಶಕ್ಕೆ, ಪೊಲೀಸರಿಂದ ಹಲ್ಲೆ ಆರೋಪ

ಉದ್ದೇಶಿಸಿ ಚೆನ್ನೈ- ಸೇಲಂ ನಡುವಣ ಅಷ್ಟಪಥ ಹೆದ್ದಾರಿ ಯೋಜನೆ ಭೂ ಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಸಂಕಷ್ಟ ಆಲಿಸಲು ಬಂದಿದ್ದ ಸ್ವರಾಜ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ಅವರನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.
ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್

ತಿರುವಣ್ಣಮಲೈ: ಉದ್ದೇಶಿಸಿ ಚೆನ್ನೈ- ಸೇಲಂ ನಡುವಣ ಅಷ್ಟಪಥ ಹೆದ್ದಾರಿ ಯೋಜನೆ ಭೂ ಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಸಂಕಷ್ಟ ಆಲಿಸಲು ಬಂದಿದ್ದ ಸ್ವರಾಜ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ಅವರನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ- ಸೇಲಂ ಅಷ್ಟಪಥ ಹೆದ್ದಾರಿ ಯೋಜನೆ ವಿರೋಧಿ ಆಂದೋಲನ ಆಹ್ವಾನ ಮೇರೆಗೆ ಟ್ರೇಡ್ ಯೂನಿಯನ್ ಮುಖಂಡ ದಿಲಿಪ್ ಸಿಂಗ್, ಪಶ್ಚಿಮ ಒಡಿಶಾ ರೈತ ಮುಖಂಡ ಲಿಂಗರಾಜ್, ಸ್ವರಾಜ್ ಇಂಡಿಯಾ  ರಾಜ್ಯ ಸಂಚಾಲಕ ಕೆ. ಬಾಲಕೃಷ್ಣ  ಅವರೊಂದಿಗೆ ಯೋಗೇಂದ್ರ ಯಾದವ್  ತಿರುವಣ್ಣ ಮಲೈ ಜಿಲ್ಲೆಯ ಅತಿಪ್ಪಾಡಿ ಗ್ರಾಮಕ್ಕೆ ಆಗಮಿಸಿದ್ದರು.

 ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಯೋಗೇಂದ್ರ ಯಾದವ್ , ಅತಿಪ್ಪಾಡಿಯಲ್ಲಿ ಅರುಲ್ ಅರುಮುಗಮ್ ಮನೆಯಲ್ಲಿ  ಬೆಳಗ್ಗೆ 8-30ರ ಸುಮಾರಿನಲ್ಲಿ 35 ರೈತರನ್ನು ಭೇಟಿ ಮಾಡಿ,  ನಂತರ ರೈತರೊಂದಿಗಿನ ಸಭೆಗಾಗಿ ತೆರಳುತ್ತಿದ್ದಾಗ  ಪೊಲೀಸರು ತಡೆದರು. ಈಗ ಅರುಲ್ ಚಿತ್ರೀಕರಣಕ್ಕೆ ಮುಂದಾದ್ದಾಗ ಪೊಲೀಸರು  ತಮ್ಮ ಮೇಲೆ ಹಲ್ಲೆ ನಡೆಸಿ, ಇರಾಯೂರ್ ನ ಕಲ್ಯಾಣ ಮಂಟಪಕ್ಕೆ ಎಳೆದುಕೊಂಡು ಹೋಗಿ ಬಂಧಿಸಿದ್ದರು ಎಂದು ಹೇಳಿದರು.

ಪ್ರತಿಭಟನಾನಿರತ ರೈತರ ಮೇಲೂ ಪೊಲೀಸರು ದೌರ್ಜನ್ಯ ನಡೆಸುತ್ತಿದುದ್ದನ್ನು ನಾನೇ ನೋಡಿದ್ದಾಗಿ ಹೇಳಿದ ಯೋಗೇಂದ್ರ ಯಾದವ್,  ಭೂ ಸ್ವಾಧೀನ ಮತ್ತು ಪೊಲೀಸ್ ದೌರ್ಜನ್ಯ ಬಗ್ಗೆ ಜಿಲ್ಲಾಧಿಕಾರಿ ಕೆ. ಎಸ್, ಕಂಡಸಾಮಿ ಜೊತೆ ಮಾತನಾಡಿದ್ದರೂ , ಮಧ್ಯಪ್ರವೇಶಕ್ಕೆ ಅವರು ನಿರಾಕರಿಸಿದರು ಎಂದರು.

 ಪೊಲೀಸರು  ತಾವೂ ಹೇಳಿದ್ದೆ ಕಾನೂನು ಎನ್ನುತ್ತಿದ್ದಾರೆ. ರೈತರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೇನೆ. ಅವರನ್ನು ಭೇಟಿಯಾಗುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಯೋಗೇಂದ್ರ ಯಾದವ್ ಹೇಳಿದರು. ಆದಾಗ್ಯೂ, ಪ್ರತಿಕ್ರಿಯೆಗಾಗಿ  ಪೊಲೀಸರು ದೊರೆಯಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com