ಅಪ್ರಾಪ್ತ ಪುತ್ರಿ ಮೇಲೆ 6 ತಿಂಗಳಿಂದ ಅತ್ಯಾಚಾರ: ಪತ್ನಿ ಎದುರು ರೆಡ್ ಹ್ಯಾಂಡ್'ಆಗಿಸಿಕ್ಕಿಬಿದ್ದ ಪತಿ
ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಕಳೆದ 6 ತಿಂಗಳಿಂದ ಅತ್ಯಾಚಾರ ನಡೆಸುತ್ತಿದ್ದ ತಂದೆಯೊಬ್ಬ ಪತ್ನಿಯ ಕೈಯಲ್ಲಿ ರೆಡ್ ಹ್ಯಾಂಡ್'ಆಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರಪ್ರದೇಶದ ಮುಜಾಫರ್ನಗರದ ಬುಢಾನಾ ಎಂಬಲ್ಲಿ ನಡೆದಿದೆ...
ಮುಜಾಫರ್ನಗರ: ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಕಳೆದ 6 ತಿಂಗಳಿಂದ ಅತ್ಯಾಚಾರ ನಡೆಸುತ್ತಿದ್ದ ತಂದೆಯೊಬ್ಬ ಪತ್ನಿಯ ಕೈಯಲ್ಲಿ ರೆಡ್ ಹ್ಯಾಂಡ್'ಆಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರಪ್ರದೇಶದ ಮುಜಾಫರ್ನಗರದ ಬುಢಾನಾ ಎಂಬಲ್ಲಿ ನಡೆದಿದೆ.
ತನ್ನ ವಿಕೃತ ಕಾಮಾಂಧಾತೆಯ ಕೃತ್ಯ ಬಯಲಾಗುತ್ತಿದ್ದಂತೆಯೇ ಆರೋಪಿ ಪತ್ನಿ ಹಾಗೂ ಮಗಳಿಗೆ ಜೀವ ಬೆದರಿಕೆ ಹಾಗಿದ್ದಾರೆ. ಆದರೆ, ಇದಕ್ಕೆ ಹೆದರದ ಪತ್ನಿ ಪತಿ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿ ತಂದೆ ತಲೆಮರೆಸಿಕೊಂಡಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.