ಡೀಸೆಲ್ ಬೆಲೆ ದೆಹಲಿ ಹಾಗೂ ಕೋಲ್ಕತ್ತಾಗಳಲ್ಲಿ 73.78 ರೂಪಾಯಿಗಳಾದರೆ, ಚೆನ್ನಿ ಹಾಗೂ ಮುಂಬೈ ನಲ್ಲಿ 78-78.33 ರೂಪಾಯಿಗಳಷ್ಟಾಗಿದೆ. ಆಗಸ್ಟ್ 1 ರಿಂದ ನಿರಂತರವಾಗಿ ತೈಲ ದರ ಏರಿಕೆಯಾಗುತ್ತಿದ್ದು, ಆ.13 ಮಾತ್ರ ಇಳಿಕೆಯಾಗಿತ್ತು. ಅತಿ ಹೆಚ್ಚು ಅಬಕಾರಿ ಸುಂಕ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದೆ ಎನ್ನುತ್ತಾರೆ ತಜ್ಞರು.