ಕೇಂದ್ರ ಸರ್ಕಾರ ನಿಷೇಧಿಸಿದ್ದ ಸಾರಿಡಾನ್ ಸೇರಿದಂತೆ ಮೂರು ಔಷಧ ಮಾರಾಟಕ್ಕೆ 'ಸುಪ್ರೀಂ' ಸದ್ಯಕ್ಕೆ ಅಸ್ತು

ಕೇಂದ್ರ ಸರ್ಕಾರ ನಿಷೇಧ ಹೇರಿದ್ದ ಸಾರಿಡಾನ್ ಮತ್ತು ಇತರೆ ಎರಡು ಔಷಧಿಗಳನ್ನು ಮಾರಾಟ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ...
ಸಾರಿಡಾನ್ ಮಾತ್ರೆ(ಸಂಗ್ರಹ ಚಿತ್ರ)
ಸಾರಿಡಾನ್ ಮಾತ್ರೆ(ಸಂಗ್ರಹ ಚಿತ್ರ)
ನವದೆಹಲಿ:  ಕೇಂದ್ರ ಸರ್ಕಾರ  ನಿಷೇಧ ಹೇರಿದ್ದ ಸಾರಿಡಾನ್ ಮತ್ತು ಇತರೆ ಎರಡು ಔಷಧಿಗಳನ್ನು ಮಾರಾಟ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಸಾರಿಡಾನ್ ಸೇರಿದಂತೆ ಸ್ಕಿನ್ ಕ್ರೀಮ್ ಪೆಂಡ್ರೆಮ್, ಡಯಾಬಿಟಿಕ್ ಡ್ರಗ್ಸ್ ಗ್ಲೂಕೋನಾರ್ಮ್ ಪಿಜಿ, ಆಂಟಿ ಬಯಾಟಿಕ್ ಲೂಪಿಡಾಕ್ಸ್, ಹಾಗೂ ಆಂಟಿ ಬ್ಯಾಕ್ಟೀರಿಯಲ್ ಟಾಕ್ಸಿಮ್ ಎಜೆಡ್ ಸೇರಿದಂತೆ 328 ಮಾತ್ರೆ, ಔಷಧಿಗಳ ತಯಾರಿಕೆ, 6 ಪೇನ್ ಕಿಲ್ಲರ್ ಟ್ಯಾಬ್ಲೆಟ್‍ಗಳ ಮೇಲೆ ತಕ್ಷಣದ ನಿರ್ಬಂಧ ಹೇರಿ ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ  ಔಷಧಿ ತಯಾರಕರು ಸುಪ್ರೀಂ ಕೋರ್ಟ್ ನಲ್ಲಿ ತಕರಾರು ಸಲ್ಲಿಸಿದ್ದರು. ಅಸುರಕ್ಷಿತ ಔಷಧಗಳ ಬಳಕೆಗೆ ನಿಷೇಧ ಹೇರುವ ಕುರಿತು ಔಷಧ ತಯಾರಿಕಾ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ 2016ರಿಂದ ನಡೆಯುತ್ತಿದ್ದ ಕಾನೂನು ಹೋರಾಟ ಈಗ ಪ್ರಮುಖ ಹಂತ ತಲುಪಿದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com