ಭಾರತದಲ್ಲಿ ಮಾಧ್ಯಮಗಳ ವ್ಯವಸ್ಥಿತ ಖರೀದಿ ಕಳವಳಕಾರಿ: ಪ್ರಕಾಶ್ ರೈ

ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಕೊರತೆ ಇದೆ ಎಂದ ಬಹುಭಾಷಾ ನಟ ಪ್ರಕಾಶ್ ರೈ ಅವರು, ದೇಶದಲ್ಲಿ ಮಾಧ್ಯಮಗಳನ್ನು....
ಪ್ರಕಾಶ್ ರೈ
ಪ್ರಕಾಶ್ ರೈ
Updated on: 
ನವದೆಹಲಿ: ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಕೊರತೆ ಇದೆ ಎಂದ ಬಹುಭಾಷಾ ನಟ ಪ್ರಕಾಶ್ ರೈ ಅವರು, ದೇಶದಲ್ಲಿ ಮಾಧ್ಯಮಗಳನ್ನು ವ್ಯವಸ್ಥಿತವಾಗಿ ಖರೀದಿ ಮಾಡುತ್ತಿರುವುದು ಕಳವಳಕಾರಿ ವಿಚಾರ ಎಂದು ಶನಿವಾರ ಹೇಳಿದ್ದಾರೆ.
ಪತ್ರಕರ್ತರ ಮೇಲಿನ ಹಲ್ಲೆ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಪ್ರಕಾಶ್ ರೈ ಅವರು, ನಾನು ಅಧಿಕಾರದಲ್ಲಿರುವವರ ವಿರುದ್ಧ ಮಾತನಾಡಿದಾಗ ಅದನ್ನು ಮಾಧ್ಯಮಗಳು ಪ್ರಕಟಿಸುವುದಿಲ್ಲ ಎಂದರು.
ಮಾಧ್ಯಮಗಳನ್ನು ವ್ಯವಸ್ಥಿತವಾಗಿ ಖರೀದಿ ಮಾಡುತ್ತಿರುವ ರೀತಿ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ದ್ವೇಷ ಸಾಧಿಸಲು ಸಹ ಜನರನ್ನು ಖರೀದಿಸಲಾಗುತ್ತಿದೆ ಎಂದ ರಾಷ್ಟ ಪ್ರಶಸ್ತಿ ವಿಜೇತ ನಟ, ಧೈರ್ಯವಾಗಿ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವಂತೆ ಪತ್ರಕರ್ತರಿಗೆ ಮನವಿ ಮಾಡಿದರು.
ನಾನು ಪತ್ರಿಕಾಗೋಷ್ಠಿ ನಡೆಸಿದಾಗ ಹಲವು ಮಾಧ್ಯಮಗಳು ಹಾಜರಿರುತ್ತವೆ. ಆದರೆ ನಾನು ಮಾತನಾಡಿದ ವಿಚಾರದ ಬಗ್ಗೆ ಬರೆಯದಿರುವ ಸಂದರ್ಭಗಳು ನಡೆದಿವೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ದೇಶ ಬಂಧು ಪ್ರಧಾನ ಸಂಪಾದಕ ಲಲಿತ್ ಸುರ್ಜನ್ ಅವರು, ಪತ್ರಕರ್ತರು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com