ಲಖನೌ ಮೂಲದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸೈಯದ್ ರಿಜ್ವಾನ್ ಅಹ್ಮದ್ ಉತ್ತರ ಪ್ರದೇಶದ ಗೋಮತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಗೋಮತಿನಗರ ಪೊಲೀಸರು ರಮ್ಯಾ ವಿರುದ್ಧ ಸೆಕ್ಷನ್ 67 ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆ, 2008 ಮತ್ತು ಸೆಕ್ಷನ್ 124ಎ ಅಡಿ ಎಫ್ಐಆರ್ ದಾಖಲಿಸಿದ್ದಾರೆ.