ಮೀರತ್ : ಮುಸ್ಲಿಮ್ ವ್ಯಕ್ತಿಗೆ ವಿಹೆಚ್ ಪಿ ಸದಸ್ಯರಿಂದ ಥಳಿತ : ವಿಡಿಯೋ ವೈರಲ್ !

ಮುಸ್ಲಿಮ್ ಹುಡುಗನ ಜೊತೆಗೆ ಕುಳಿತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಪೊಲೀಸ್ ಸಿಬ್ಬಂದಿ ಥಳಿಸಿದ ಘಟನೆ ನಡೆದ ಮಾರನೇ ದಿನವೇ ಮುಸ್ಲಿಮ್ ವ್ಯಕ್ತಿಯೋರ್ವನನ್ನು ವಿಹೆಚ್ ಪಿ ಸದಸ್ಯರು ಥಳಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಥಳಿತದ ಚಿತ್ರ
ಥಳಿತದ ಚಿತ್ರ

ಮೀರತ್ : ಮುಸ್ಲಿಮ್ ಹುಡುಗನ ಜೊತೆಗೆ ಕುಳಿತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಪೊಲೀಸ್ ಸಿಬ್ಬಂದಿ ಥಳಿಸಿದ ಘಟನೆ ನಡೆದ ಮಾರನೇ ದಿನವೇ  ಮುಸ್ಲಿಮ್ ವ್ಯಕ್ತಿಯೋರ್ವನನ್ನು ವಿಹೆಚ್ ಪಿ ಸದಸ್ಯರು ಥಳಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ವಿಶ್ವ ಹಿಂದೂ ಪರಿಷದ್ ಸಂಘಟನೆಯ ಕೆಲ ಸದಸ್ಯರು, ಇಲ್ಲಿ ವ್ಯಾಸಂಗ ಮಾಡಲು ಬಂದಿದ್ದೀಯಾ ಅಥವಾ ಲವ್ ಜಿಹಾದ್ ಪ್ರಚೋದಿಸಲು ಬಂದಿದ್ದೀಯಾ ಎಂದು ಕೂಗುತ್ತಾ  ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ವಿಡಿಯೋ ದಲ್ಲಿ ಸೆರೆಯಾಗಿದೆ.

ಈ ಘಟನೆ ಸಂಬಂಧ  ವಿಹೆಚ್ ಪಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ 18 ಮಂದಿಯನ್ನು ಬಂಧಿಸಿಲಾಗಿದ್ದು, 20 ರಿಂದ 25 ಮಂದಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು  ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರವಷ್ಟೇ ಮೀರತ್ ವೈದ್ಯಕೀಯ ಕಾಲೇಜ್ ಬಳಿ ಮುಸ್ಲಿಮ್ ಹುಡುಗ ಜೊತೆ ಕುಳಿತಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಜೀಪಿಗೆ ಕೂರಿಸಿಕೊಂಡ ಪೊಲೀಸರು ಥಳಿಸಿರುವ ವಿಡಿಯೋ  ವೈರಲ್ ಆಗಿತ್ತು.

ಈ ಸಂಬಂಧ ಮಹಿಳಾ ಕಾನ್ಸ್ ಟೇಬಲ್ ಸೇರಿದಂತೆ ಮೂವರನ್ನು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಮಂಗಳವಾರ ಅಮಾನತ್ತುಗೊಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com