ಫ್ರಿಡ್ಜ್ ಸ್ಫೋಟ: ಮನೆ ಗೋಡೆ ಕುಸಿದು 4 ಮಂದಿ ಸಾವು, 2 ಗಾಯ

ಮನೆಯಲ್ಲಿದ್ದ ರೆಫ್ರಿಜರೇಟರ್ ಸ್ಫೋಟಗೊಂಡ ಪರಿಣಾಮ ಗೋಡೆ ಕುಸಿದು ನಾಲ್ವರು ದುರ್ಮರಣವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ...
ಫ್ರಿಡ್ಜ್ ಸ್ಫೋಟ: ಮನೆಯ ಗೋಡೆ ಕುಸಿದು 4 ಮಂದಿ ಸಾವು, 2 ಗಾಯ
ಫ್ರಿಡ್ಜ್ ಸ್ಫೋಟ: ಮನೆಯ ಗೋಡೆ ಕುಸಿದು 4 ಮಂದಿ ಸಾವು, 2 ಗಾಯ
ಗ್ವಾಲಿಯರ್: ಮನೆಯಲ್ಲಿದ್ದ ರೆಫ್ರಿಜರೇಟರ್ ಸ್ಫೋಟಗೊಂಡ ಪರಿಣಾಮ ಗೋಡೆ ಕುಸಿದು ನಾಲ್ವರು ದುರ್ಮರಣವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 
ಗ್ವಾಲಿಯರ್'ನ ದರ್ಪಣ್ ಕಾಲೋನಿಯ ಮನೆಯೊಂದರಲ್ಲಿ ಫ್ರಿಡ್ಜ್ ಕಂಪ್ರೆಸ್ಸರ್ ಸ್ಫೋಟಗೊಂಡಿದೆ. ಸ್ಫೋಟ ತೀವ್ರದಿಂದ ಕೂಡಿದ ಹಿನ್ನಲೆಯಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದೆ. ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ದಾರೆ. 
ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com