ಮೋದಿ ಶಿವಲಿಂಗದ ಮೇಲಿನ ಚೇಳು ಹೇಳಿಕೆ: ದೆಹಲಿ ಕೋರ್ಟ್ ನಿಂದ ಶಶಿ ತರೂರ್ ಗೆ ಸಮನ್ಸ್

ಆರ್‌ಎಸ್‌ಎಸ್‌ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರು ಶಿವಲಿಂಗದ ಮೇಲಿನ ಚೇಳು ಇದ್ದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್....
ಶಶಿ ತರೂರ್
ಶಶಿ ತರೂರ್
Updated on: 
ನವದೆಹಲಿ: ಆರ್‌ಎಸ್‌ಎಸ್‌ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರು ಶಿವಲಿಂಗದ ಮೇಲಿನ ಚೇಳು ಇದ್ದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ದೆಹಲಿ ಕೋರ್ಟ್ ಶನಿವಾರ ಸಮನ್ಸ್ ಜಾರಿ ಮಾಡಿದೆ.
ಶಶಿ ತರೂರ್ ವಿರುದ್ಧ ದೆಹಲಿ ಬಿಜೆಪಿ ಮುಖಂಡ ರಾಜೀವ್ ಬಬ್ಬರ್ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಚೀಫ್ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು, ಜೂನ್ 7ರಂದು ವಿಚಾರಣೆಗೆ ಹಾಜರಾಗುವಂತೆ ತರೂರ್ ಗೆ ಸಮನ್ಸ್ ನೀಡಿದ್ದಾರೆ.
ಶಶಿ ತರೂರ್ ಅವರು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ, ಆರ್‌ಎಸ್‌ಎಸ್‌ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿವಲಿಂಗದ ಮೇಲೆ ಕುಳಿತ ಚೇಳಿಗೆ ಹೋಲಿಸಿದ್ದರು ಎಂದಿದ್ದರು. 
ಆರ್‌ಎಸ್‌ಎಸ್‌ ನಾಯಕರೋರ್ವರ ಹೇಳಿಕೆಯನ್ನು ಆಧರಿಸಿ ನಾನು ಈ ಹೋಲಿಕೆ ಮಾಡುತ್ತಿದ್ದು, ಪ್ರಧಾನಿ ಮೋದಿ ಒಂದರ್ಥದಲ್ಲಿ ಶಿವಲಿಂಗದ ಮೇಲೆ ಕುಳಿತ ಚೇಳಿನಂತೆ ಭಾಸವಾಗುತ್ತಿದ್ದಾರೆ. ಕೈಯಲ್ಲಿ ಅದನ್ನು ತೆಗೆದುಹಾಕಲು ಸಾಧ್ಯವಿಲ್ಲ, ಅಲ್ಲದೆ ಚಪ್ಪಲಿಯಲ್ಲಿ ಹೊಡೆದು ಹಾಕುವುದೂ ಸಾಧ್ಯವಿಲ್ಲ ಎಂದಿದ್ದರು.
ತರೂರ್ ಅವರ ಈ ಹೇಳಿಕೆ ಕೋಟ್ಯಾಂತರ ಶಿವಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ರಾಜೀವ್ ಬಬ್ಬರ್ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com