ಮಧ್ಯರಾತ್ರಿ ರಹಸ್ಯವಾಗಿ ಸೇರುತ್ತಿದ್ದ ಪ್ರೇಮಿಗಳಿಗೆ ರಾತ್ರೋರಾತ್ರಿ ಮದುವೆ ಮಾಡಿಸಿದ ಗ್ರಾಮಸ್ಥರು!

ಮಧ್ಯರಾತ್ರಿಯ ವೇಳೆ ರಹಸ್ಯವಾಗಿ ಪ್ರೇಮಿಗಳು ಸಂದಿಸುವುದನ್ನು ಗಮನಿಸಿದ ಗ್ರಾಮಸ್ಥರು, ತಾವೇ ಮುಂದೆ ನಿಂತು ಆ ಜೋಡಿಗೆ ಅದೇ ರಾತ್ರಿಯೇ ವಿವಾಹ ಮಾಡಿಸಿರುವ ಘಟನೆ ನಡೆದಿದೆ.
ನವ ಜೋಡಿಯ ಚಿತ್ರ
ನವ ಜೋಡಿಯ ಚಿತ್ರ
Updated on

ಪಾಟ್ನಾ: ಮಧ್ಯರಾತ್ರಿಯ ವೇಳೆ ರಹಸ್ಯವಾಗಿ ಪ್ರೇಮಿಗಳು ಸಂದಿಸುವುದನ್ನು ಗಮನಿಸಿದ ಗ್ರಾಮಸ್ಥರು, ತಾವೇ ಮುಂದೆ ನಿಂತು ಆ ಜೋಡಿಗೆ ಅದೇ ರಾತ್ರಿಯೇ ವಿವಾಹ ಮಾಡಿಸಿರುವ ಘಟನೆ ನಡೆದಿದೆ. 
  
ಪಂಚಾಯತ್ ಸದಸ್ಯರ ಆದೇಶದಂತೆ ಪುರೋಹಿತನನ್ನು ಕತ್ತಲ ರಾತ್ರಿಯಲ್ಲಿ ಸ್ಥಳಕ್ಕೆ ಕರೆಸಿ, ಸಂಪ್ರದಾಯ ಬದ್ಧವಾಗಿ ವಿವಾಹ ಕಾರ್ಯ ನೆರವೇರಿಸಿದ್ದಾರೆ. ಈ ಘಟನೆ ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಡೆದಿದೆ. ಕೊನ್ಹಿಯಾ ಎಂಬ ಗ್ರಾಮದ ಯುವತಿ ಪಕ್ಕದ ಹಳ್ಳಿಯ ಯುವಕನ ಜೊತೆ ಕೆಲವಾರು ದಿನಗಳಿಂದ ಪ್ರೀತಿ ಪ್ರೇಮ ನಡೆಸುತ್ತಿದ್ದಳು. ಆದೇ ರೀತಿ ಮಂಗಳವಾರ ಮಧ್ಯರಾತ್ರಿ ಆಕೆಯನ್ನು ಭೇಟಿಯಾಗಲು ಯುವಕ ಕದ್ದುಮುಚ್ಚಿ ಕೊನ್ಹಿಯಾ ಗ್ರಾಮ ಪ್ರವೇಶಿಸಿದ್ದ. ಇವರ ಸಂಬಂಧವನ್ನು ಕಳೆದ  ಕೆಲ ದಿನಗಳಿಂದ ಗಮನಿಸುತ್ತಿದ್ದ ಗ್ರಾಮಸ್ಥರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ನಿರ್ಧರಿಸಿದ್ದರು. 

ಪ್ರೇಮಿಗಳನ್ನು ಹಿಡಿಯುವ  ಯೋಜನೆಯ ಭಾಗವಾಗಿ ನೂರಾರು ಗ್ರಾಮಸ್ಥರು ಅಂದು ಒಂದು ಕಡೆ ಜಮಾಯಿಸಿದರು. ಇವರೆಲ್ಲರೂ ತಮ್ಮ ಸಮೀಪ ಬರುತ್ತಿದ್ದಂತೆಯೇ ಹೆದರಿದ ಯುವಕ ಓಡಿಹೋಗಲು ಪ್ರಯತ್ನಿಸಿದ. ಆದರೆ ಅಡ್ಡಗಡ್ಡಿದ ಗ್ರಾಮಸ್ಥರು ಆತನನ್ನು ಹಿಡಿದುಕೊಂಡರು. ತಮ್ಮೂರಿನ ಹುಡುಗಿ ಜತೆ ವಿವಾಹವಾಗಲು ಇಷ್ಟ ಇದೆಯೇ ಎಂದು ಪ್ರಶ್ನಿಸಿದಾಗ ಆತ ಒಪ್ಪಿಗೆ ಇದೆ ಎಂದು ಸೂಚಿಸಿದ.    

ನಂತರ ಯುವತಿಯ ಅಭಿಪ್ರಾಯವನ್ನೂ ಕೇಳಿದಾಗ ಆಕೆಯೂ ಒಪ್ಪಿಕೊಂಡಳು. ಕೂಡಲೇ ಸ್ಥಳಕ್ಕೆ ಪುರೋಹಿತನನ್ನು ಕರೆಸಿ ಜೋಡಿಯ ಮದುವೆ ನಡೆಸಿಯೇ ಬಿಟ್ಟರು ಈ ವಿಷಯ  ಕುರಿತು ಮಾಹಿತಿ ಪಡೆದ ಪೊಲೀಸರು ಕೊನ್ಹಿಯಾ ಗ್ರಾಮ  ತಲುಪುವ ಮೊದಲೇ ಪ್ರೇಮಿಗಳ ಮದುವೆ ನಡೆದು ಹೋಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com