ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆನೆ, ಹುಲಿ ರೀತಿ ಗೋವು ಸಫಾರಿಗೆ ಉತ್ತರಪ್ರದೇಶ ಸರ್ಕಾರ ಚಿಂತನೆ

ಅಭಯಾರಣ್ಯಗಳಲ್ಲಿ ಆನೆ, ಹುಲಿ ಸಫಾರಿ ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಉತ್ತರಪ್ರದೇಶ ಸರ್ಕಾರ ಗೋವು ಸಫಾರಿ ಎಂಬ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ. 

ಲಖನೌ: ಅಭಯಾರಣ್ಯಗಳಲ್ಲಿ ಆನೆ, ಹುಲಿ ಸಫಾರಿ ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಉತ್ತರಪ್ರದೇಶ ಸರ್ಕಾರ ಗೋವು ಸಫಾರಿ ಎಂಬ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ. 

ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತಿರುಗುವ ಬೀಡಾಡಿ ದನಗಳನ್ನು ಒಂದೆಡೆ ಸೇರಿಸಿ, ಆ ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. 

ಉತ್ತರಪ್ರದೇಶದ ಪಶುಸಂಗೋಪನಾ ಖಾತೆ ಸಚಿವ ಲಕ್ಷ್ಮೀ ನಾರಾಯಣ್ ಚೌಧರಿಯವರು ಇಂತಹದ್ದೊಂದು ವಿನೂತನ ಯೋಜನೆಯ ರೂಪರೇಷೆ ತಯಾರಿಸಿದ್ದಾರೆ. 

ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಎಲ್ಲೆಲ್ಲಿ ಖಾಲಿ ಜಾಗ ಇದೆಯೋ ಅಲ್ಲಿ ಕನಿಷ್ಠ 15,000-20,000 ಬೀಡಾಡಿ ದನಗಳನ್ನು ಇಡಲಾಗುವುದು. ಇದರಿಂದ ಬೀಡಾಡಿ ದನಗಳಿಂದ ರಸ್ತೆಗಳಲ್ಲಿ ಆಗುವ ತೊಂದರೆ ತಪ್ಪುತ್ತದೆ. ದನಗಳ ನಿರ್ವಹಣೆಯೂ ಸುಲಭವಾಗುತ್ತದೆ. ಜೊತೆಗೆ ಈ ಪ್ರದೇಶದಲ್ಲಿ ಗೋವಿನ ತ್ಯಾಜ್ಯದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಘಟಕ ತಯಾರಿಸಲಾಗುವುದು. ಬಯೋಗ್ಯಾಸ್ ಘಟಕ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com