ಹೈದರಾಬಾದ್ ಎನ್ಕೌಂಟರ್: ಸುಪ್ರೀಂ ಮೆಟ್ಟಿಲೇರಿದ ಅತ್ಯಾಚಾರಿ ಕುಟುಂಬ, ಸಿಬಿಐ ತನಿಖೆಗೆ ಮನವಿ

ಸೈಬರಾಬಾದ್ ಪೊಲೀಸ ಎನ್ಕೌಂಟರ್'ನಲ್ಲಿ ಹತ್ಯೆಗೀಡಾದ ದಿಶಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಕುಟುಂಬದ ಸಂಬಂಧಿಕರು ಈ ಎನ್ಕೌಂಟರ್ ಪ್ರಕರಣ ಸಂಬಂದ ಸಿಬಿಐ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ. ಅಲ್ಲದೆ, ತಮ್ಮ ಪ್ರತಿಯೊಂದು ಕುಟುಂಬಕ್ಕೂ ರೂ.50 ಲಕ್ಷ ಪರಿಹಾರ ನೀಡಬೇಕೆಂದು ಆರೋಪಿಗಳ ಸಂಬಂಧಿಕರು ಕೋರಿದ್ದಾರೆ. 
ಪ್ರಿಯಾಂಕಾ ರೆಡ್ಡಿ
ಪ್ರಿಯಾಂಕಾ ರೆಡ್ಡಿ

ನವದೆಹಲಿ: ಸೈಬರಾಬಾದ್ ಪೊಲೀಸ ಎನ್ಕೌಂಟರ್'ನಲ್ಲಿ ಹತ್ಯೆಗೀಡಾದ ದಿಶಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಕುಟುಂಬದ ಸಂಬಂಧಿಕರು ಈ ಎನ್ಕೌಂಟರ್ ಪ್ರಕರಣ ಸಂಬಂದ ಸಿಬಿಐ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ. ಅಲ್ಲದೆ, ತಮ್ಮ ಪ್ರತಿಯೊಂದು ಕುಟುಂಬಕ್ಕೂ ರೂ.50 ಲಕ್ಷ ಪರಿಹಾರ ನೀಡಬೇಕೆಂದು ಆರೋಪಿಗಳ ಸಂಬಂಧಿಕರು ಕೋರಿದ್ದಾರೆ. 

ಎನ್'ಕೌಂಟರ್ ಪ್ರಕರಣದ ತನಿಖೆಯನ್ನು ಈಗಾಗಲೇ ನಿವೃತ್ತಿ ನ್ಯಾಯಾಧೀಶ ವಿ.ಎಸ್.ಸಿರ್'ಪುರ್ಕರ್ ನೇತೃತ್ವದ ನ್ಯಾಯಾಂಗ ತನಿಖೆಗೆ ವಹಿಸಲಾಗಿದ್ದು, 6 ತಿಂಗಳ ಒಳಗಾಗಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು.

ನವೆಂಬರ್ 29 ರಂದು ಹತ್ಯೆಯಾಗಿರುವ ಕಾಮುಕರು ಪ್ರಿಯಾಂಕಾ ರೆಡ್ಡಿ ಮೇಲೆ ಅಟ್ಟಹಾಸ ಮೆರೆದಿದ್ದರು. ಪ್ರಿಯಾಂಕಾ ರೆಡ್ಡಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದ ನಾಲ್ವರು ಕಾಮುಕರು, ನಂತರ ಆಕೆಯನ್ನು ಹತ್ಯೆ ಮಾಡಿ, ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಪ್ರಕರಣ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. 

ಘಟನೆ ಬಳಿಕ ಕಾಮುಕರನ್ನು ಬಂಧನಕ್ಕೊಳಪಡಿಸಿದ್ದ ಪೊಲೀಸರು ತನಿಖೆ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಲ್ಲದೆ, ಪೊಲೀಸರ ಬಳಿಯಿದ್ದ ಪಿಸ್ತೂಲನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಕಾಮುಕರ ಮೇಲೆ ಎನ್'ಕೌಂಟರ್ ನಡೆಸಿ ಹತ್ಯೆ ಮಾಡಿದ್ದರು. ಪೊಲೀಸರ ಈ ಕಾರ್ಯಕ್ಕೆ ದೇಶದಾದ್ಯಂತ ಶ್ಲಾಘನೆಗಳು ವ್ಯಕ್ತವಾಗಿತ್ತು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com