ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ವಯೋಮಿತಿ 65 ವರ್ಷಕ್ಕೆ ಹೆಚ್ಚಳ; ಕೇಂದ್ರದ ಮಹತ್ವದ ನಿರ್ಣಯ

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ವಯೋಮಿತಿಯನ್ನು 65 ವರ್ಷಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ವಯೋಮಿತಿಯನ್ನು 65 ವರ್ಷಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಹೌದು.. ನೂತನವಾಗಿ ಸೃಷ್ಟಿಸಲಾಗಿರುವ ಅತ್ಯುಚ್ಚ ಸೇನಾ ಹುದ್ದೆ ಎನಿಸಿರುವ ಚೀಫ್ ಆಫ್ ಡಿಫೆನ್ಸ್ ಸ್ಟಾಫ್(ಸಿಡಿಎಸ್)ನ ವಯೋಮಿತಿಯನ್ನು 65 ವರ್ಷಕ್ಕೆ ಏರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕಾಗಿ 1954ರ ಸೇನಾ ನಿಯಮಗಳಲ್ಲಿ ಬದಲಾವಣೆ ತರಲಾಗಿದ್ದು, ಮೂಲ ನಿಯಮಗಳ ಪ್ರಕಾರ, ಸೇನೆಯ ಮೂರು ವಿಭಾಗದ ಮುಖ್ಯಸ್ಥರ ವಯೋಮಿತಿ 62 ವರ್ಷವಿದೆ. ಈಗ ಈ ಅವಧಿಯನ್ನು 3 ವರ್ಷ ವಿಸ್ತರಿಸಲು ಅನುವಾಗುವಂತೆ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಈಗ ಹೊಸದಾಗಿ ರಚಿತವಾಗಿರುವ ಸಿಡಿಎಸ್ ಹುದ್ದೆಗೋಸ್ಕರ ಈ ಬದಲಾವಣೆ ತರಲಾಗಿದೆ ಎಂದು ಹೇಳಲಾಗಿದೆ.

ಈ ಕುರಿತಂತೆ ಈ ಹಿಂದೆ ಅಂದರೆ ಡಿಸೆಂಬರ್ 24ರಂದು ನಡೆದ ಕೇಂದ್ರ ಸಂಪುಟ ಸಮಿತಿಯು ಸಿಡಿಎಸ್ ಹುದ್ದೆಗೆ ಅನುಮೋದನೆ ನೀಡಿತ್ತು. 

ರಕ್ಷಣಾ ಇಲಾಖೆಯಲ್ಲಿ ನೂತನವಾಗಿ ರಚಿಸಲಾಗಿರುವ ಮಿಲಿಟರಿ ವ್ಯವಹಾರಗಳ ವಿಭಾಗಕ್ಕೆ ಮುಖ್ಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿರಲಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ ಚೀಫ್ಸ್ ಆಫ್ ಸ್ಟಾಫ್ ಕಮಿಟಿ (ಸಿಒಎಸ್​ಸಿ)ಯ ಖಾಯಂ ಅಧ್ಯಕ್ಷರಾಗಿರಲಿದ್ದಾರೆ. ಅಂದರೆ, 3 ವರ್ಷ ಅವಧಿಯವರೆಗೆ ಅಥವಾ 65 ವಯಸ್ಸು ಮುಕ್ತಾಯವಾಗುವವರೆಗೂ ಅವರು ಸಿಒಎಸ್​ಸಿಯ ಅಧ್ಯಕ್ಷರಾಗಿ ಉಳಿಯಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com