ಹೆಲ್ಮೆಟ್ ಧರಿಸದೇ ಪ್ರಿಯಾಂಕಾ ಪ್ರಯಾಣ, ಸ್ಕೂಟರ್ ಮಾಲೀಕನಿಗೆ 6 ಸಾವಿರ ರೂ ದಂಡ!

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರ ಅಪ್ತನಿಗೆ ಉತ್ತರ ಪ್ರದೇಶ ಟ್ರಾಫಿಕ್ ಪೊಲೀಸರು ಬರೊಬ್ಬರಿ 6, 100 ರೂ ದಂಡ ವಿಧಿಸಿದ್ದಾರೆ.
ಹೆಲ್ಮೆಟ್ ಧರಿಸದೇ ಪ್ರಿಯಾಂಕಾ ಪ್ರಯಾಣ
ಹೆಲ್ಮೆಟ್ ಧರಿಸದೇ ಪ್ರಿಯಾಂಕಾ ಪ್ರಯಾಣ
Updated on: 

ಲಖನೌ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರ ಅಪ್ತನಿಗೆ ಉತ್ತರ ಪ್ರದೇಶ ಟ್ರಾಫಿಕ್ ಪೊಲೀಸರು ಬರೊಬ್ಬರಿ 6, 100 ರೂ ದಂಡ ವಿಧಿಸಿದ್ದಾರೆ.

ಹೌದು.. ನಿನ್ನೆ ಮಾಜಿ ಐಪಿಎಸ್ ಅಧಿಕಾರಿ ಎಸ್​ಆರ್​ ದಾರಾಪುರಿ ಅವರನ್ನ ಭೇಟಿಯಾಗುವ ವೇಳೆ ಪ್ರಿಯಾಂಕಾ ಗಾಂಧಿ ಅವರು ದ್ವಿಚಕ್ರವಾಹನದಲ್ಲಿ ಹೆಲ್ಮೆಟ್ ಧರಿಸದೇ ಪ್ರಯಾಣಿಸಿದ್ದರು. ಹೀಗಾಗಿ ಇಂದು ಉತ್ತರ ಪ್ರದೇಶದ ಟ್ರಾಫಿಕ್ ಪೊಲೀಸರು ಸ್ಕೂಟರ್​​ ಮಾಲೀಕನಿ​​ಗೆ 6,100 ರೂಪಾಯಿ ದಂಡ ವಿಧಿಸಿದ್ದಾರೆ.

ಇನ್ನು ಸ್ಕೂಟರ್ ಸವಾರಿ ವೇಳೆ ಪ್ರಿಯಾಂಕಾರನ್ನು ತಡೆದಿದ್ದ ಪೊಲೀಸರು ಅವರನ್ನು ಹಿಂದಕ್ಕೆ ಹೋಗುವಂತೆ ಸೂಚಿಸಿದ್ದರು. ಆದರೆ ಪೊಲೀಸರಿಗೇ ಚಳ್ಳೇ ಹಣ್ಣು ತಿನ್ನಿಸಿದ್ದ ಪ್ರಿಯಾಂಕಾ ಕೊನೆಗೂ ಮಾಜಿ ಐಪಿಎಸ್ ಅಧಿಕಾರಿ ಎಸ್​ಆರ್​ ದಾರಾಪುರಿ ಅವರನ್ನ ಭೇಟಿಯಾಗಿದ್ದರು. ಅಲ್ಲದೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು,  'ಮಹಿಳಾ  ಪೊಲೀಸರು ತಮ್ಮ ಕುತ್ತಿಗೆ ಹಿಸುಕಿ, ನೂಕಿದ್ದರು ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನ ಫೊಲೀಸರು ಸುಳ್ಳು ಎಂದು ತಳ್ಳಿಹಾಕಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com