ವೃದ್ಧಾಪ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿರಿಯ ಜೀವಿಗಳು!

ಎಲ್ಲವನ್ನೂ ಕಳೆದುಕೊಂಡು ವೃದ್ಧಾಶ್ರಮದಲ್ಲಿ ತಮ್ಮ ಕೊನೆಯ ಕಾಲವನ್ನು ಕಳೆಯುತ್ತಿದ್ದ ಹಿರಿಯ ಜೀವಿಗಳು ನಡುವೆ ಪ್ರೀತಿ ಅರಳಿದ್ದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
ವೃದ್ಧ ದಂಪತಿ
ವೃದ್ಧ ದಂಪತಿ
Updated on: 

ಎಲ್ಲವನ್ನೂ ಕಳೆದುಕೊಂಡು ವೃದ್ಧಾಶ್ರಮದಲ್ಲಿ ತಮ್ಮ ಕೊನೆಯ ಕಾಲವನ್ನು ಕಳೆಯುತ್ತಿದ್ದ ಹಿರಿಯ ಜೀವಿಗಳು ನಡುವೆ ಪ್ರೀತಿ ಅರಳಿದ್ದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಕೇರಳದ ತ್ರಿಶೂರ್ ನಲ್ಲಿದ್ದ ವೃದ್ಧಾಶ್ರಮದಲ್ಲಿ ತಂಗಿದ್ದ ಥೈಕಟ್ಟುಸ್ಸೇರಿಯದ 65 ವರ್ಷದ ಲಕ್ಷ್ಮಿ ಅಮ್ಮಲ್ ಮತ್ತು 67 ವರ್ಷದ ಕೊಚಾನಿಯನ್ ಮೆನನ್ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಪತಿ ಮೃತಪಟ್ಟ ಬಳಿಕ ಲಕ್ಷ್ಮಿ ಅವರು ತ್ರಿಶೂರ್ ನ ರಾಮವರ್ಮಪುರದಲ್ಲಿ ಸರ್ಕಾರ ನಡೆಸುವ ವೃದ್ಧಾಶ್ರಮವನ್ನು ಸೇರಿದ್ದರು. ಕೆಲ ವರ್ಷಗಳ ನಂತರ ಕೊಚಾನಿಯನ್ ಸಹ ಇದೇ ಆಶ್ರಮ ಸೇರಿದ್ದರು. 

ಬಳಿಕ ಇಬ್ಬರು ಒಬ್ಬರಿಗೊಬ್ಬರು ಕಷ್ಟ ಸುಖಗಳನ್ನು ಹಂಚಿಕೊಂಡರು. ಇದೀಗ ಮದುವೆಯಾಗಿ ಇಬ್ಬರು ಬಾಳಿನ ನೊಗವನ್ನು ಎಳೆಯಲು ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com