ಸಿಆರ್ ಪಿಎಫ್ ಹುತಾತ್ಮ ಯೋಧರ ಕುಟುಂಬಗಳನ್ನು ದತ್ತು ಪಡೆದ ಬಿಹಾರ ಜಿಲ್ಲಾ ಮ್ಯಾಜಿಸ್ಟ್ರೇಟ್ !

ಜಮ್ಮು ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳ ಬೆಂಬಲಕ್ಕೆ ಇಡೀ ದೇಶವೇ ನಿಂತಿದೆ. ..
ಜಿಲ್ಲಾ ಮ್ಯಾಜಿಸ್ಟ್ರೇಟ್  ಹಿನಾಯತ್ ಖಾನ್
ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿನಾಯತ್ ಖಾನ್
Updated on
ಪಾಟ್ನಾ: ಜಮ್ಮು ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳ ಬೆಂಬಲಕ್ಕೆ ಇಡೀ ದೇಶವೇ ನಿಂತಿದೆ. 
ಬಿಹಾರದ ಶೇಕ್ ಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಇನಾಯತ್ ಖಾನ್ ಇಬ್ಬರು ಹುತಾತ್ಮ ಕುಟುಂಬಗಳನ್ನು ಜತ್ತು ಪಡೆದಿದ್ದಾರೆ.
ಪಾಟ್ನಾದ  ಹುತಾತ್ಮ ಯೋಧ ಸಂಜಯ್ ಕುಮಾರ್ ಸಿಂಗ್ ಮತ್ತು ಬಾಗಲ್ಪುರ್ ನ ರತನ್ ಕುಮಾರ್ ಠಾಕೂರ್ ಅವರ ಕುಟುಂಬಗಳನ್ನು ದತ್ತು ಪಡೆದಿದ್ದಾರೆ,
ಎರಡು ಕುಟುಂಬಗಳನ್ನು ದತ್ತು ಪಡೆದಿರುವ ಖಾನ್, ಎರಡು ಕುಟುಂಬಗಳ ಜೀವನ ನಿರ್ವಹಣೆಗೆ ಅಗತ್ಯವಾದ ಹಣ ಒದಗಿಸುವ ಭರವಸೆ ನೀಡಿದ್ದಾರೆ, ಇಬ್ಬರು ಹುತಾತ್ಮ ಯೋಧರ ಕುಟುಂಬಕ್ಕೆ ಹಣಕಾಸಿನ ನೆರವು ನೀಡಲು ಅಕೌಂಟ್ ತೆರೆದಿದ್ದು, ಇಚ್ಚಿಸುವವರು ಮಾರ್ಚ್ 10 ರೊಳಗೆ  ಹಣ ನೀಡುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com