ಮೈತ್ರಿ ಬಳಿಕ ಶಿವಸೇನೆ-ಬಿಜೆಪಿ ಮುಖಂಡರು
ಮೈತ್ರಿ ಬಳಿಕ ಶಿವಸೇನೆ-ಬಿಜೆಪಿ ಮುಖಂಡರು

ಮಿತ್ರ ಪಕ್ಷಗಳ ಕುರಿತ ಬಿಜೆಪಿ ಧೋರಣೆ ಬದಲಾಗಿದ್ದೇ ಮೈತ್ರಿಗೆ ಕಾರಣ: ಉದ್ಧವ್ ಠಾಕ್ರೆ

ಬಿಜೆಪಿ ಈಗ ಮೈತ್ರಿ ಮತ್ತು ಮಿತ್ರ ಪಕ್ಷಗಳನ್ನು ನೋಡುತ್ತಿರುವ ಮನೋಭಾವ ಬದಲಿಸಿಕೊಂಡಿದ್ದೇ ಮೈತ್ರಿಗೆ ಕಾರಣ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮುಂಬೈ: ಬಿಜೆಪಿ ಈಗ ಮೈತ್ರಿ ಮತ್ತು ಮಿತ್ರ ಪಕ್ಷಗಳನ್ನು ನೋಡುತ್ತಿರುವ ಮನೋಭಾವ ಬದಲಿಸಿಕೊಂಡಿದ್ದೇ ಮೈತ್ರಿಗೆ ಕಾರಣ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯ ಮೈತ್ರಿಯನ್ನು ಬಳಿಕ ಕಡಿದುಕೊಂಡಿದ್ದ ಶಿವಸೇನೆ ಇದೀಗ ಮತ್ತೆ ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದು, ಜಂಟಿಯಾಗಿಯೇ ಲೋಕಸಭಾ ಚುನಾವಣೆ ಎದುರಿಸುವುದಾಗಿ ಘೋಷಣೆ ಮಾಡಿದೆ. ತನ್ನ ಈ ದಿಢೀರ್ ಅಚಚ್ಚರಿ ನಿರ್ಧಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, 'ಬಿಜೆಪಿ ಈಗ ಮೈತ್ರಿಯನ್ನು ನೋಡುತ್ತಿರುವ ಮನೋಭಾವ ಬದಲಿಸಿಕೊಂಡಿದೆ. ಇದೇ ಕಾರಣಕ್ಕೆ ಮತ್ತೆ ಮೈತ್ರಿ ಸಾಧ್ಯವಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದರು.
ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, 'ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಜೊತೆಗೆ ಕೈ ಜೊಡಿಸುವುದಾಗಿ ಘೋಷಿಸಿದರು. 'ಅವರು (ಬಿಜೆಪಿ) ಈಗ ಮೈತ್ರಿ ಪಕ್ಷಗಳನ್ನು ನೋಡುವ ರೀತಿ ಬದಲಾಗಿದೆ. ಆದ್ದರಿಂದ ನಾನು ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವೆ ಎಂದು ತಿಳಿಸಿದರು. 
ಸಿಎಂ ಸ್ಥಾನ ಬಿಜೆಪಿಗೆ; ಉದ್ಧವ್ ವಿರೋಧ
ಇದೇ ವೇಳೆ ವಿಧಾನ ಸಭೆಗೆ ಅತಿ ಹೆಚ್ಚು ಸದಸ್ಯರನ್ನು ಕಳಿಸುವ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಎನ್ನುವ ಬಿಜೆಪಿ ಬೇಡಿಕೆಯನ್ನು ಅವರು ತಿರಸ್ಕರಿಸಿದರು. ಈ ವೇಳೆ ಮಾತನಾಡಿದ ಅವರು, 'ನಾವು ಶಿವಸೇನಾದ ಮುಖ್ಯಮಂತ್ರಿಯನ್ನು ನೋಡಲು ಇಚ್ಚಿಸುತ್ತೇವೆ. ಆದ್ದರಿಂದ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ. ಈಗಾಗಲೇ ನಾವು ಒಪ್ಪಂದದಲ್ಲಿ ಗೆಲುವು ಸಾಧಿಸಿದ್ದೇವೆ. ಈಗ ನಾವು ನಿಜವಾದ ಯುದ್ದವಾಗಿರುವ ಚುನಾವಣೆಯನ್ನು ಗೆಲ್ಲಬೇಕಾಗಿದೆ ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com