ಪರಿಕ್ಕರ್ ಆರೋಗ್ಯ ಸ್ಥಿರ, 'ಆಂತರಿಕ ರಕ್ತಸ್ರಾವ ಸ್ಥಗಿತಗೊಂಡಿದೆ': ಗೋವಾ ಸ್ಪೀಕರ್

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕಳೆದ ಶನಿವಾರ ಮತ್ತೆ ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ...
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್
Updated on: 
ಪಣಜಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕಳೆದ ಶನಿವಾರ ಮತ್ತೆ ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಗೋವಾ ಸ್ಪೀಕರ್ ಪ್ರಮೋದ್ ಸಾವಂತ್ ಅವರು ಸೋಮಾವಾರ ಹೇಳಿದ್ದಾರೆ.
ಈಗಾಗಲೇ ದೆಹಲಿಯ ಏರ್ಮ್ಸ್ ನಿಂದ ಇಬ್ಬರು ತಜ್ಞ ವೈದ್ಯರು ಪಣಜಿಗೆ ಆಗಮಿಸಿದ್ದು, ಪರಿಕ್ಕರ್ ಅವರನ್ನು ತಾಪಸಣೆ ನಡೆಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಏಮ್ಸ್ ನ ವೈದ್ಯ ಡಾ ಪ್ರಮೋದ್ ಗಾರ್ಗ್ ನೇತೃತ್ವದ ತಂಡ ಪಣಜಿಗೆ ಆಗಮಿಸಿದ್ದು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಇನ್ನು ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್, ಪರಿಕ್ಕರ್ ಅವರ ಆರೋಗ್ಯ ಸ್ಥಿರವಾಗಿದೆ. 'ಆಂತರಿಕ ರಕ್ತಸ್ರಾವ ಸಹ ಸ್ಥಗಿತಗೊಂಡಿದೆ' ಎಂದು ಹೇಳಿದರು.
ಪರಿಕ್ಕರ್ ಅವರು ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅಮೆರಿಕಾ, ದೆಹಲಿಯ ಏಮ್ಸ್ ಹಾಗೂ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com