ಯೋಧ ಅಭಿನಂದನ್ ಮುಂದಿಟ್ಟುಕೊಂಡು ನರಿಬುದ್ದಿ ಪ್ರದರ್ಶಿಸಿದರೆ ಪಾಕಿಸ್ತಾನಕ್ಕೇ ಅಪಾಯ!

ತಾನು ವಶಕ್ಕೆ ಪಡೆದಿರುವ ಭಾರತೀಯ ವಾಯುಸೇನೆ ಅಧಿಕಾರಿ ಅಭಿನಂದನ್ ರನ್ನು ಮುಂದಿಟ್ಟುಕೊಂಡು ಮತ್ತೆ ಪಾಕಿಸ್ತಾನ ತನ್ನ ನರಿಬುದ್ಧಿ ಪ್ರದರ್ಶಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೇ ಅಪಾಯ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ತಾನು ವಶಕ್ಕೆ ಪಡೆದಿರುವ ಭಾರತೀಯ ವಾಯುಸೇನೆ ಅಧಿಕಾರಿ ಅಭಿನಂದನ್ ರನ್ನು ಮುಂದಿಟ್ಟುಕೊಂಡು ಮತ್ತೆ ಪಾಕಿಸ್ತಾನ ತನ್ನ ನರಿಬುದ್ಧಿ ಪ್ರದರ್ಶಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೇ ಅಪಾಯ...
ಜಿನೀವಾ ಒಪ್ಪಂದ ಅನ್ವಯ ತಾನು ಸೆರೆ ಹಿಡಿದ ಶತ್ರು ಪಾಳಯದ ಯೋಧನನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬ ನಿಯಮವಿದೆಯಾದರೂ, ಈ ನಿಯಮವನ್ನು ಅದೆಷ್ಟು ದೇಶಗಳು ಪಾಲಿಸಿವೆ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ಯಾವ ದೇಶದ ಮಿಲಿಟರಿಯೂ ಮತ್ತೊಂದು ದೇಶದ ಮಿಲಿಟರಿ ಯೋಧನನ್ನು ಸೆರೆ ಹಿಡಿದಾಗ ಆತನನ್ನು ಸೌಜನ್ಯದಿಂದ ನಡೆಸಿಕೊಂಡ ಉದಾಹರಣೆ ಇಲ್ಲ. ಅದರಲ್ಲೂ ಪಾಕಿಸ್ತಾನ ಮಿಲಿಟರಿ ಬಗ್ಗೆ ಯಾವುದೇ ನಂಬಿಕೆ ಇಲ್ಲ. 
ಆದರೆ ಒಂದಂತ ಸತ್ಯ.. ಪಾಕಿಸ್ತಾನದಲ್ಲಿ ಅಭಿನಂದನ್ ಗೆ ಕಷ್ಟವಾಗಬಹುದು. ನಮ್ಮ ರಹಸ್ಯ ಸೇನಾ ಮಾಹಿತಿಗಳನ್ನು ಪಡೆಯಲು ಪಾಕ್ ಸೇನೆ ತನ್ನ ವಕ್ರಬುದ್ಧಿಯ ಪ್ರಯೋಗ ಕೂಡ ಮಾಡಬಹುದು. ದೈಹಿಕ ಮತ್ತು ಮಾನಸಿಕ ಹಿಂಸೆಯೂ ಇದರಲ್ಲಿ ಅಡಕವಾಗಿರುತ್ತದೆ ಎಂಬುದು ಗಮನಾರ್ಹ ಅಂಶ. ಆದರೆ ಯೋಧ ಅಭಿನಂದನ್ ಅವರ ಪ್ರಾಣಕ್ಕೆ ಅಪಾಯವಿಲ್ಲ. ಪ್ರಸ್ತುತ ಅಭಿನಂದನ್ ಪಾಕಿಸ್ತಾನ ಸೇನೆಯ ವಶದಲ್ಲಿದ್ದರೂ ಈಗಾಗಲೇ ಇಂಡೋ-ಪಾಕ್ ಶೀಥಲ ಸಮರ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿದ ವಿಚಾರವೇ.. ಅಲ್ಲದೆ ವಿಶ್ವಸಂಸ್ಥೆ ಕೂಡ ಈ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿದೆ.
ಹೀಗಾಗಿ ಉಭಯ ದೇಶಗಳ ನಡುವಿನ ಸಂಘರ್ಷ ಸ್ಥಗಿತಕ್ಕೆ ವಿಶ್ವಸಂಸ್ಥೆಯೇ ಮುಂದಾಗಬಹುದು. ಇದರ ನಿರೀಕ್ಷೆಯೂ ಇಲ್ಲದೇ ಇಲ್ಲ.  ಭಾರತ ಪಾಕಿಸ್ತಾನ ಸೇನೆಯ ಮೇಲೆ ದಾಳಿ ಮಾಡಿಲ್ಲ. ಬದಲಿಗೆ ಭಾರತದ ಭದ್ರತೆಗೆ ಆತಂಕವಾಗಿ ಪರಿಣಮಿಸಿದ್ದ ಉಗ್ರರ ಮೇಲೆ ತನ್ನ ವಾಯುಸೇನೆಯನ್ನು ಬಳಕೆ ಮಾಡಿ ದಾಳಿ ಮಾಡಿದೆ. ಆದರೆ ಪಾಕಿಸ್ತಾನ ನೇರವಾಗಿಯೇ ಭಾರತದ ಮೇಲೆ ದಾಳಿಗೆ ಮುಂದಾಗಿದ್ದು, ಇದು ವಿಶ್ವಸಂಸ್ಥೆಯ ಪರಿಣಗಣನೆಗೂ ಕೂಡ ಬರುತ್ತದೆ. ಈ ಕಾರಣಕ್ಕೆ ವಿಶ್ವಮಟ್ಟದಲ್ಲಿ ಭಾರತಕ್ಕೆ ಬೆಂಬಲ ಹೆಚ್ಚಾಗುವ ನಿರೀಕ್ಷೆ ಕೂಡ ಇದೆ.
ಈ ಹಿಂದೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಐಎಎಫ್ ಪೈಲಟ್ ನಚಿಕೇತರಂತೆಯೇ ಪಾಕಿಸ್ತಾನ ಅಭಿನಂದನ್ ರನ್ನೂ ಬಿಡುಗಡೆ ಮಾಡುತ್ತದೆ ಎಂಬ ನಿರೀಕ್ಷೆಯನ್ನಂತೂ ನಾವು ಇಟ್ಟುಕೊಳ್ಳುವಂತಿಲ್ಲ. ಕಾರಣ ಈಗಾಗಲೇ ಭಾರತದ ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ಗಳ ಹೊಡೆತದಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನ ಭಾರತದ ಮುಂದಿನ ನಡೆ ಏನಿರಬಹುದು ಎಂಬ ವಿಚಾರದ ಕುರಿತು ತಲೆ ಕೆಡಿಸಿಕೊಂಡಿದೆ. ಇದೇ ಕಾರಣಕ್ಕೆ ಪ್ರಸ್ತುತ ಬಂಧನಕ್ಕೀಡಾಗಿರುವ ಪೈಲಟ್ ಅಭಿನಂದನ್ ಮೂಲಕ ಮಾಹಿತಿ ಹೊರತೆಗೆಯುವ ಕೆಲಸ ಮಾಡಲಿದೆ. ಇದೇ ಕಾರಣಕ್ಕೆ ಅಭಿನಂದನ್ ಅವರು ಜೀವಂತವಾಗಿರುವುದು ಪಾಕಿಸ್ತಾನಕ್ಕೂ ಮುಖ್ಯ.
ಅಂತೆಯೇ ಭಾರತ ಸರ್ಕಾರ ಕೂಡ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಿಕೊಂಡು ಬರುವುದಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಮಾತುಕತೆಯ ಮೂಲಕ ಪ್ರಕ್ಷುಬ್ಧತೆಯನ್ನು ತಿಳಿಗೊಳಿಸಿ ನಮ್ಮ ಯೋಧ ಸುರಕ್ಷಿತವಾಗಿ ಮನೆಗೆ ಹಿಂದಿರುಗುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ವಿಶ್ವಸಂಸ್ಥೆಯಲ್ಲಿ, ಮಿತ್ರರಾಷ್ಟ್ರಗಳ ಮೂಲಕ ಭಾರತ ಒತ್ತಡ ಹೇರಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com