'ಹೆಚ್ಎಎಲ್ ಗುತ್ತಿಗೆ ಬಗ್ಗೆ ದೇಶದ ದಾರಿ ತಪ್ಪಿಸುತ್ತಿರುವ ರಾಹುಲ್ ಗೆ ನಾಚಿಕೆಯಾಗಬೇಕು'

ಹೆಚ್ಎಎಲ್ ಗೆ ನೀಡಲಾಗಿರುವ ಗುತ್ತಿಗೆಗಳನ್ನು ಸಾಬೀತುಪಡಿಸಿ ಇಲ್ಲವೇ ರಾಜೀನಾಮೆ ನೀಡಿ ಎಂದು ಸವಾಲು ಹಾಕಿರುವ ರಾಹುಲ್ ಗಾಂಧಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತೀಕ್ಷ್ಣ ಪ್ರತಿಕ್ರಿಯೆ ನೀದಿದ್ದಾರೆ.
ನಿರ್ಮಲಾ ಸೀತಾರಾಮನ್-ರಾಹುಲ್ ಗಾಂಧಿ
ನಿರ್ಮಲಾ ಸೀತಾರಾಮನ್-ರಾಹುಲ್ ಗಾಂಧಿ
Updated on: 
ನವದೆಹಲಿ: ಹೆಚ್ಎಎಲ್ ಗೆ ನೀಡಲಾಗಿರುವ ಗುತ್ತಿಗೆಗಳನ್ನು ಸಾಬೀತುಪಡಿಸಿ ಇಲ್ಲವೇ ರಾಜೀನಾಮೆ ನೀಡಿ ಎಂದು ಸವಾಲು ಹಾಕಿರುವ ರಾಹುಲ್ ಗಾಂಧಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತೀಕ್ಷ್ಣ ಪ್ರತಿಕ್ರಿಯೆ ನೀದಿದ್ದಾರೆ. 
ಹೆಚ್ಎಎಲ್ ಸಂಸ್ಥೆ ಸಹಿ ಹಾಕಿರುವ ಗುತ್ತಿಗೆ ವಿವರಗಳನ್ನು ನಿರ್ಮಲಾ ಸೀತಾರಾಮನ್ ಟ್ವೀಟ್ ನಲ್ಲೇ ಬಹಿರಂಗಪಡಿಸಿದ್ದಾರೆ "2014-2018 ರ ಅವಧಿಯಲ್ಲಿ ಹೆಚ್ಎಎಲ್ ಒಟ್ಟಾರೆ 26570.8 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಗಳಿಗೆ  ಸಹಿ ಹಾಕಿದೆ, 73000 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಗಳು ಈಗಾಗಲೇ ಪ್ರಾರಂಭವಾಗಿವೆ. ಆದರೂ ಹೆಚ್ಎಎಲ್ ಗುತ್ತಿಗೆ ವಿಷಯದಲ್ಲಿ ದೇಶದ ಜನತೆಯನ್ನು ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿಗೆ ನಾಚಿಕೆಯಾಗಬೇಕು, ಈಗಲಾದರೂ ರಾಹುಲ್ ಗಾಂಧಿ ಕ್ಷಮೆ ಕೇಳುತ್ತಾರಾ? ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ. 
ರಕ್ಷಣಾ ಸಚಿವರು ಹೇಳುತ್ತಿರುವ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆ ಪೈಕಿ ಹೆಚ್ಎಎಲ್ ಗೆ ಒಂದೇ ಒಂದು ರೂಪಾಯಿ ಕೂಡಾ ಸಿಕ್ಕಿಲ್ಲ. ರಕ್ಷಣಾ ಸಚಿವರು ಹೇಳುವಂತೆ ಒಂದೇ ಒಂದು ಗುತ್ತಿಗೆಗೂ ಸಹ ಹೆಚ್ಎಎಲ್ ಸಹಿಹಾಕಿಲ್ಲ, ಹೆಚ್ಎಎಲ್ ಗೆ ನೀಡಲಾಗಿರುವ ಗುತ್ತಿಗೆಗಳನ್ನು ಸಾಬೀತುಪಡಿಸಿ ಇಲ್ಲವೇ ರಾಜೀನಾಮೆ ನೀಡಿ ಎಂದು ರಾಹುಲ್ ಗಾಂಧಿ ಸವಾಲು ಹಾಕಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com