ಮುಜಾಫರ್ನಗರ: 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮಲ ತಂದೆ ಅತ್ಯಾಚಾರ ಮಾಡಿರುವ ಘಟನೆ ಶಾಮ್ಲಿ ಜಿಲ್ಲೆಯ ಕಂಧ್ಲಾ ಟೌನ್ ನಲ್ಲಿ ನಡೆದಿದೆ.
ಶನಿವಾರ ಘಟನೆ ನಡೆದಿದ್ದು, ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದನ್ನು ಸಂಬಂಧಿ ತನ್ವೀರ್ ಎಂಬಾತ ವಿಡಿಯೋ ಮಾಡಿದ್ದಾನೆ. ಘಟನೆ ಬಳಿಕ ಇದೀಗ ಮಲತಂದೆ ವಾಸೀಂ ಹಾಗೂ ಸಂಬಂಧಿ ತನ್ವೀರ್ ಇಬ್ಬರೂ ತಲೆಮರೆಸಿಕೊಂಡಿದ್ದಾರೆ.
ಘಟನೆ ಕುರಿತಂತೆ ಸಂತ್ರಸ್ತ ಬಾಲಕಿಯ ತಾಯಿ ದೂರು ದಾಖಲಿಸಿದ್ದಾರೆ. ಮಗಳ ಮೇಲೆ ತಂದೆ ಅತ್ಯಾಚಾರ ಮಾಡಿದ್ದು, ಕೃತ್ಯದ ವಿಡಿಯೋ ಮಾಡಿಕೊಂಡಿದ್ದಾರೆ. ವಿಚಾರವನ್ನು ಯಾರಿಗಾದರೂ ಹೇಳಿದರೆ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಹೇಳಿಕೊಂಡಿದ್ದಾರೆ.
ಮೊದಲನೇ ಪತಿ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಿಧನರಾದ ಬಳಿಕ ವಾಸೀಮ್ ನನ್ನು ಮದುವೆ ಮಾಡಿಕೊಳ್ಳಲಾಗಿತ್ತು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.