ಪ್ರಧಾನಿ ಮೋದಿಯವರ ಸರ್ವಾಧಿಕಾರ, ಅಪ್ರಜಾಪ್ರಭುತ್ವ ಆಡಳಿತ ಕಿತ್ತೊಗೆಯಲು ಸಮಯ ಬಂದಿದೆ: ದೆಹಲಿ ಸಿಎಂ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ವಾಧಿಕಾರ, ಅಪ್ರಜಾಪ್ರಭುತ್ವ ಆಡಲಿತ ಕಿತ್ತೊಗೆಯಲು ಸಮಯ ಬಂದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ...
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ವಾಧಿಕಾರ, ಅಪ್ರಜಾಪ್ರಭುತ್ವ ಆಡಲಿತ ಕಿತ್ತೊಗೆಯಲು ಸಮಯ ಬಂದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ. 
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪ್ರಧಾನಿ ಮೋದಿಯವರ ಸರ್ವಾಧಿಕಾರ, ಅಪ್ರಜಾಪ್ರಭುತ್ವ ಆಡಲಿತ ಕಿತ್ತೊಗೆಯಲು ಸಮಯ ಬಂದಿದೆ. ಈ ಐದು ವರ್ಷಗಳಲ್ಲಿ ಪ್ರಧಾನಮಂತ್ರಿಗಳು ಯಾವ ರೀತಿಯ ರಾಜಕೀಯ ವಿರೋಧಗಳನ್ನು ಎದುರಿಸಿದ್ದರು ಎಂಬುದನ್ನು ಜನರು ಮರೆಯಬಾರದು ಎಂದು ಹೇಳಿದ್ದಾರೆ. 
ನಾಚಿಕೆಯಿಲ್ಲದ ಮೋದಿ ಸರ್ಕಾರ ಅಖಿಲೇಶ್ ಯಾದವ್ ಅವರ ಮೇಲೆ ಯಾವ ರೀತಿ ಸಿಬಿಐ ದಾಳಿ ನಡೆಸಿತ್ತು, ಮೋದಿಯವರು ರಾಜಕೀಯ ವಿರೋಧಗಳನ್ನು ಯಾವ ರೀತಿಯಲ್ಲಿ ಈ ಐದು ವರ್ಷಗಳಲ್ಲಿ ಎದುರಿಸಿದ್ದಾರೆಂಬುದನ್ನು ಜನರು ಮರೆಯಬಾರದು, ಮೋದಿಯವರು ಸರ್ವಾಧಿಕಾರ ಆಡಳಿತ ಹಾಗೂ ಅಪ್ರಜಾಪ್ರಭುತ್ವದ ಆಡಳಿತವನ್ನು ತೊಡೆದು ಹಾಕಲು ಇದು ಸಕಾಲವಾಗಿದೆ ಎಂದು ತಿಳಿಸಿದ್ದಾರೆ. 
ಜ.5 ರಂದು ಸಿಬಿಐ ಅಧಿಕಾರಿಗಳು ದೆಹಲಿ ಹಾಗೂ ಉತ್ತರಪ್ರದೇಶದ ಒಟ್ಟು 14 ಪ್ರದೇಶಗಳಲ್ಲಿ ದಾಳಿ ನಡೆಸಿದ್ದರು. ಇದರಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರ ಮನೆ ಕೂಡ ಸೇರಿತ್ತು. ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಹಾಗೂ ಬಹುಜನ ಸಮಾಜ ಪಕ್ಷದ ಸದಸ್ಯರ ಸಂಪರ್ಕವಿರುವುದು ಇದರಿಂದ ಬಹಿರಂಗಗೊಂಡಿತ್ತು. 
ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರ 2015ರಿಂದಲೂ ದೆಹಲಿ ಸರ್ಕಾರದ ಸಚಿವರ ಮನೆಗಳು ಹಾಗೂ ಕಚೇರಿಗಳ ಮೇಲೆ ಹಲವು ಬಾರಿ ಸಿಬಿಐ ದಾಳಿ ನಡೆಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com