ಬ್ಯಾಂಕರ್, ಆಮ್ ಆದ್ಮಿ ಪಕ್ಷದ ನಾಯಕಿ ಮೀರಾ ಸನ್ಯಾಲ್ ನಿಧನ

ಆಮ್ ಆದ್ಮಿ ಪಕ್ಷದ ನಾಯಕಿ ಮೀರಾ ಸನ್ಯಾಲ್ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಮೀರಾ ಸನ್ಯಾಲ್
ಮೀರಾ ಸನ್ಯಾಲ್
Updated on
ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕಿ ಮೀರಾ ಸನ್ಯಾಲ್ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
57 ವರ್ಷದ ಸನ್ಯಾಲ್ ನಿಧನಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ಸಂತಾಪ ಸೂಚಿಸಿದ್ದು, ಉತ್ತಮ ಹೃದಯದ ಮೀರಾ ಸನ್ಯಾಲ್ ಅವರು ಇನ್ನಿಲ್ಲ. ಆದರೆ ಅವರ ನೆನಪು ಶಾಶ್ವತವಾಗಿ ನಮ್ಮ ಹೃದಯಲ್ಲಿ ಉಳಿಯುತ್ತದೆ ಎಂದು ಟ್ವೀಟ್ ಮಾಡಿದೆ.
ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಸಂತಾಪ ಸೂಚಿಸಿದ್ದು, ಮೀರಾ ಸನ್ಯಾಲ್ ದಿಢೀರ್ ಸಾವಿನ ಸುದ್ದಿ ಕೇಳಿ ತುಂಬಾ ದುಃಖವಾಯಿತು ಎಂದು ಟ್ವೀಟ್ ಮಾಡಿದ್ದಾರೆ.
ಸನ್ಯಾಲ್ ಅವರು ಆಮ್ ಆದ್ಮಿ ಪಕ್ಷ ಸೇರುವ ಮುನ್ನ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್ ಸಿಇಒ ಹಾಗೂ ಅಧ್ಯಕ್ಷೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com