ಬಿಜೆಪಿಗೂ ಶಾಸಕರನ್ನು ಕಳೆದುಕೊಳ್ಳುವ ಭಯ: ಶಾಸಕರು ದೆಹಲಿಯಿಂದ ಗುರುಗ್ರಾಮಕ್ಕೆ ಶಿಫ್ಟ್!

ಸಮ್ಮಿಶ್ರ ಸರ್ಕಾರದ ಶಾಸಕರನ್ನು ತನ್ನತ್ತ ಸೆಳೆಯುವುದಕ್ಕೆ ಬಿಜೆಪಿ ಯತ್ನಿಸುತ್ತಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ಜೆಡಿಎಸ್-ಕಾಂಗ್ರೆಸ್ ಸಹ ಪ್ರತಿತಂತ್ರ ರೂಪಿಸಿದ್ದು, ಬಿಜೆಪಿ ಶಾಸಕರನ್ನೂ ಸೆಳೆಯಲು
ಬಿಜೆಪಿಗೂ ಶಾಸಕರನ್ನು ಕಳೆದುಕೊಳ್ಳುವ ಭಯ: ಶಾಸಕರು ದೆಹಲಿಯಿಂದ ಗುರುಗ್ರಾಮಕ್ಕೆ ಶಿಫ್ಟ್!
ಬಿಜೆಪಿಗೂ ಶಾಸಕರನ್ನು ಕಳೆದುಕೊಳ್ಳುವ ಭಯ: ಶಾಸಕರು ದೆಹಲಿಯಿಂದ ಗುರುಗ್ರಾಮಕ್ಕೆ ಶಿಫ್ಟ್!
Updated on
ನವದೆಹಲಿ: ಸಮ್ಮಿಶ್ರ ಸರ್ಕಾರದ ಶಾಸಕರನ್ನು ತನ್ನತ್ತ ಸೆಳೆಯುವುದಕ್ಕೆ ಬಿಜೆಪಿ ಯತ್ನಿಸುತ್ತಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ಜೆಡಿಎಸ್-ಕಾಂಗ್ರೆಸ್ ಸಹ ಪ್ರತಿತಂತ್ರ ರೂಪಿಸಿದ್ದು, ಬಿಜೆಪಿ ಶಾಸಕರನ್ನೂ ಸೆಳೆಯಲು ಯತ್ನಿಸುತ್ತಿವೆ. 
ಬಿಜೆಪಿ ತನ್ನ ಶಾಸಕರನ್ನು ರಕ್ಷಿಸಿಕೊಳ್ಳುವುದಕ್ಕೆ ದೆಹಲಿಯಲ್ಲಿ ಬೀಡು ಬಿಟ್ಟಿರುವ ಶಾಸಕರನ್ನು ಗುರುಗ್ರಾಮಕ್ಕೆ ಶಿಫ್ಟ್ ಮಾಡುತ್ತಿದೆ. ಸಂಜೆ 6 ಗಂಟೆಗೆ ಸಿದ್ಧವಾಗಿರುವಂತೆ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಶಾಸಕರಿಗೆ ಸೂಚನೆ ನೀಡಿದ್ದಾರೆ. ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರನ್ನು ಸೆಳೆಯುವುದಕ್ಕೆ ಸಿಎಂ ಕುಮಾರಸ್ವಾಮಿ ಇಬ್ಬರು ಸಚಿವರಿಗೆ ಸೂಚನೆ ನೀಡಿದ್ದು. ಈ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತವಿರುವ ಹರ್ಯಾಣದ ಗುರುಗ್ರಾಮಕ್ಕೆ ಬಿಜೆಪಿ ಶಾಸಕರನ್ನು ಶಿಫ್ಟ್ ಮಾಡಲಾಗುತ್ತಿ ಎಂದು ತಿಳಿದುಬಂದಿದೆ. 
ಬಿಜೆಪಿ ಜೊತೆ ಸಂಪರ್ಕದಲ್ಲಿರುವ 3 ಶಾಸಕರು ಮುಂಬೈ ನಲ್ಲಿದ್ದು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎಂದು ಸಚಿವ ಡಿಕೆ ಶಿವಕುಮಾರ್ ಆರೋಪಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com