ದೊಡ್ಡ ಗುಂಪುಗಳಲ್ಲಿ ಬರುವ ಪ್ರವಾಸಿಗರು ಕಾನೂನು ಉಲ್ಲಂಘಿಸಿದರೆ 10,000 ರೂ. ದಂಡ ವಿಧಿಸಲಾಗುವುದು. ಅದೇ ತಪ್ಪಿನ ಪುನರಾವರ್ತನೆ ಮಾಡಿದರೆ ಜೈಲು ಶಿಕ್ಷೆ ವಿಧಿಸಲೂ ಅವಕಾಶವಿದೆ. ಕಡಲ ತೀರ ಹಾಗೂ ಪ್ರವಾಸಿ ತಾಣಗಳಲ್ಲಿ ಮದ್ಯಪಾನ ಮಾಡುವುದು, ಬಾಟಲಿ ಒಯ್ಯುವುದು ಹಾಗೂ ಬೀಚ್‌ಗಳು ಸೇರಿದಂತೆ ತೆರೆದ ಸ್ಥಳದಲ್ಲಿ ಅಡುಗೆ ಮಾಡುವುದನ್ನೂ ನಿಷೇಧಿಸಲಾಗಿದೆ.