ಐಸಿಐಸಿಐ-ವಿಡಿಯೊಕಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 22ರಂದು ಚಂದಾ ಕೋಚಾರ್, ದೀಪಕ್ ಕೋಚಾರ್, ವೇಣುಗೋಪಾಲ್ ಧೂತ್ ಮತ್ತು ಇತರರ ವಿರುದ್ಧ ಮಿಶ್ರಾ ಎಫ್ಐಆರ್ ಪ್ರತಿಗೆ ಸಹಿ ಹಾಕಿದ್ದರು. ಜನವರಿ 24ರಂದು ಅಕ್ರಮ ಸಾಲ ಪ್ರಕರಣಕ್ಕೆ ಸಂಬಂಧಿಸಿ ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಓ ಅವರ ಪತಿ ದೀಪಕ್ ಕೋಚಾರ್, ವಿಡಿಯೋಕಾನ್ ಎಂ.ಡಿ. ವೇಣುಗೋಪಾಲ್ ಧೂತ್ ಅವರ ಮೇಲೆ ಸಿಬಿಐ ಪ್ರಕರಣ ದಾಖಲಿಸಿತ್ತು.