ಮೂಗಿಗೆ ಪೈಪ್‌ ಹಾಕಿಕೊಂಡೇ ಬಜೆಟ್‌ ಮಂಡಿಸಿದ ಪರಿಕ್ಕರ್‌, ಹೈ ಆನ್‌ ಜೋಷ್‌ ಎಂದ ಗೋವಾ ಸಿಎಂ

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರು ಮೂಗಿಗೆ ಪೈಪ್ ಹಾಕಿಕೊಂಡೇ ಬುಧವಾರ 2019-20ನೇ ಸಾಲಿನ...
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್
Updated on: 
ಗೋವಾ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ  ಮನೋಹರ್‌ ಪರಿಕ್ಕರ್‌ ಅವರು ಮೂಗಿಗೆ ಪೈಪ್ ಹಾಕಿಕೊಂಡೇ ಬುಧವಾರ 2019-20ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.
ಹಣಕಾಸು ಖಾತೆಯನ್ನು ನಿಭಾಯಿಸುತ್ತಿರುವ ಮನೋಹರ್‌ ಪರಿಕ್ಕರ್‌ ಅವರು ಇಂದು ಬಜೆಟ್‌ ಮಂಡಿಸಿದರು.
ನಾನು ಅತ್ಯಂತ ಜೋಷ್‌ನಿಂದಲೇ ಬಜೆಟ್‌ ಮಂಡಿಸುತ್ತಿದ್ದೇನೆ. ಹೈ ಆನ್‌ ಜೋಷ್‌, ಫುಲ್ಲಿ ಇನ್ ಹೋಷ್ ಎಂದು ಹೇಳುವ ಮೂಲಕ ಪರಿಕ್ಕರ್‌ ಅವರು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಗೋವಾ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗಿರೀಶ್‌ ಚೋಡನ್ಕರ್‌ ಅವರು, ಪೆಹಲೇ ಹೋಷ್‌ ಮೇ ಆವೋ, ಬಾದ್‌ ಮೆ ಜೋಷ್‌ ಕಿ ಬಾತ್‌ ಕರೋ ಎಂದು ಟೀಕಿಸಿದ್ದರು.
ನನ್ನ ಕೊನೆಯ ಉಸಿರು ಇರುವವರೆಗೂ ಗೋವಾದ ರಾಜ್ಯದ ಜನತೆ ಪರವಾಗಿ ದುಡಿಯುತ್ತೇನೆ ಎಂದೂ ಮನೋಹರ್‌ ಪರಿಕ್ಕರ್‌ ಭಾವನಾತ್ಮಕವಾಗಿ ಹೇಳಿದರು. 
ಪರಿಕ್ಕರ್ ಅವರು ಅತ್ಯಂತ ಮೃದು ದನಿಯಲ್ಲಿ ಬಜೆಟ್ ಭಾಷಣ ಮಾಡಿದರು. ಮಧ್ಯೆ ಮಧ್ಯೆ ಸಿಬ್ಬಂದಿಯನ್ನು ಕರೆದು ನೀರು ತರಿಸಿಕೊಂಡು ಕುಡಿದು ಭಾಷಣ ಮುಂದುವರಿಸಿದರು. 
ಮನೋಹರ್‌ ಪರಿಕ್ಕರ್‌ ಅವರ ಈ ಕರ್ತವ್ಯ ಪಾಲನೆಯನ್ನು ಕಂಡು ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com