ಮಹಾರಾಷ್ಟ್ರ: ಅಧಿಕಾರಿ ಮೇಲೆ ತನ್ನ ಬೆಂಬಲಿಗರೊಂದಿಗೆ ಕೆಸರು ಸುರಿದು ಹಲ್ಲೆ ನಡೆಸಿದ ಕಾಂಗ್ರೆಸ್ ಶಾಸಕ ನಿತೇಶ್ ನಾರಾಯಣ ರಾಣೆ ಕಂಕವ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ನಿತೇಶ್ ನಾರಾಯಣ ರಾಣೆ ಹಾಗೂ ಅವರ 40-50 ಮಂದಿ ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್ 353, 342, 332, 324, 323, 120(ಎ), 147, 143, 504, ಹಾಗೂ 506ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಮಹಾರಾಷ್ಟ್ರ-ಗೋವಾ ನಡುವಿನ ಕಂಕವ್ಲಿ ಹೆದ್ದಾರಿಯ ರಸ್ತೆ ವೀಕ್ಷಣೆಗೆ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಪುತ್ರ ನಿತೇಶ್ ನಾರಾಯಣ್ ರಾಣೆ ತೆರಳಿದ್ದರು. ಈ ವೇಳೆ ರಸ್ತೆ ಗುಂಡಿಗಳನ್ನು ಕಂಡು ಎಂಜಿನಿಯರ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಿತೇಶ್ ನಾರಾಯಣ ರಾಣೆ ಹಾಗೂ ಕಂಕವ್ಲಿ ಪಾಲಿಕೆ ಅಧ್ಯಕ್ಷ ಸಮಿರ್ ನಾಲ್ವಾಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಪ ಎಂಜಿನಿಯರ್ ಪ್ರಕಾಶ್ ಖೆಡೇಕರ್ ಅವರ ಮೇಲೆ ಕೆಸರು ಸುರಿದು ಬ್ರಿಡ್ಜ್ ಗೆ ಕಟ್ಟಲು ಪ್ರಯತ್ನಿಸಿದದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.
Congress MLA Nitesh Narayan Rane surrenders before Kankavali police. FIR has been registered against him & 40-50 supporters under Sections 353, 342, 332, 324, 323, 120(A), 147, 143, 504, 506 of IPC. He & his supporters threw mud on an engineer earlier today. pic.twitter.com/QG9bQpofzT