ಮಧ್ಯಪ್ರದೇಶ: ಹುಲಿ ಬಾಯಿಂದ ಮಾಲೀಕನನ್ನು ರಕ್ಷಿಸಿದ ಸಾಕುನಾಯಿ!

ಹುಲಿಗೆ ಆಹಾರವಾಗಬೇಕಿದ್ದ ತನ್ನ ಮಾಲೀಕನನ್ನು ಸಾಕುನಾಯಿಯೊಂದು ರಕ್ಷಿಸಿರುವ ಘಟನೆ ಮಧ್ಯಪ್ರದೇಶದ ಪಿಪರ್ವಾಣಿ ಗ್ರಾಮದಲ್ಲಿ ನಡೆದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮಧ್ಯಪ್ರದೇಶ: ಹುಲಿಗೆ ಆಹಾರವಾಗಬೇಕಿದ್ದ ತನ್ನ ಮಾಲೀಕನನ್ನು ಸಾಕುನಾಯಿಯೊಂದು ರಕ್ಷಿಸಿರುವ ಘಟನೆ ಮಧ್ಯಪ್ರದೇಶದ ಪಿಪರ್ವಾಣಿ ಗ್ರಾಮದಲ್ಲಿ ನಡೆದಿದೆ.
ಪಂಚಮ್ ಗಜ್ವಿಯಾ ಎಂಬ ವ್ಯಕ್ತಿ ಹುಲಿ ದಾಳಿಯಿಂದ ಗಾಯಗೊಂಡಿದ್ದಾರೆ, ನನ್ನ ಮಗ ಮೂತ್ರ ವಿಸರ್ಜಿಸಲು ಕಾಡಿನ ಮಧ್ಯದೊಳಗೆ ಹೋಗಿದ್ದ, ಈ ವೇಳೆ ಹುಲಿಯೊಂದು ಆತನ ಮೇಲೆ ದಾಳಿ ಮಾಡಿದೆ. 
ಇದೇ ವೇಳೆ ನಾವು ಸಾಕಿದ್ದ ನಾಯಿ ಬೇರೆ ನಾಯಿಗಳ ಜೊತೆ ಸೇರಿ ಹುಲಿ ವಿರುದ್ಧ ಜೋರಾಗಿ ಬೊಗಳಲು ಆರಂಭಿಸಿದೆ, ಇದರಿಂದ ಹುಲಿ ಹೆದರಿ ಓಡಿಹೋಗಿದೆ, ಗಾಯಗೊಂಡಿರುವ ನನ್ನ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಗಾಯಗೊಂಡಿರುವ ಪಂಚಮ್ ಗಜ್ವಿಯಾ  ತಾಯಿ ಹೇಳಿದ್ದಾರೆ.
ಕಾಡಿನಲ್ಲಿ ನನ್ನ ಮೇಲೆ ಹುಲಿ ದಾಳಿ ಮಾಡಿದಾಗ ನನ್ನ ನಾಯಿ ಜೊತೆ ಇದ್ದ ಕಾರಣ ನಾನು ಬದುಕುಳಿದಿದ್ದೇನೆ ಎಂದು ಗಜ್ವಿಯಾ ಹೇಳಿದ್ದಾರೆ. ಇನ್ನೂ ಗಜ್ವಿಯಾ ತನ್ನ ಸಾಕು ನಾಯಿ ತನ್ನನ್ನು ರಕ್ಷಿಸಿತು ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com