ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುಪತಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ಭೀಕರ ಅಪಘಾದಲ್ಲಿ 6 ಮಂದಿ ಸಾವು

ತಿರುಪತಿಗೆ ತೆರಳುತ್ತಿದ್ದ ಕಾರೊಂದು ಶುಕ್ರವಾರ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದು,...
ವಿಜಯವಾಡ: ತಿರುಪತಿಗೆ ತೆರಳುತ್ತಿದ್ದ ಕಾರೊಂದು ಶುಕ್ರವಾರ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರೇಣಿಗುಂಟ ಪೊಲೀಸರ ಪ್ರಕಾರ, ಚಿತ್ತೂರ್ ಜಿಲ್ಲೆಯ ರೇಣಿಗುಂಟ ಮಂಡಲದ ಗುರುವರಾಜುಪಲ್ಲೆ ಗ್ರಾಮದ ಬಳಿ ಇಂದು ಬೆಳಗಿನ ಜಾವ ಈ ಅಪಘಾತ ಸಂಭವಿಸಿದ್ದು, ಗುಂಟುರ್ ಜಿಲ್ಲೆಯ ಅಚಂಪೇಟ್ ಮಂಡಲದ ರುದ್ರಾವರಂ ಗ್ರಾಮದ ನಿವಾಸಿಗಳು ಕಾರಿನಲ್ಲಿ ತಿರುಪತಿಗೆ ತೆರಳುತ್ತಿದ್ದರು ಎನ್ನಲಾಗಿದೆ.
ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಸಿವಿಆರ್ ರೂಯಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 
ಮೃತರನ್ನು ವಿಜಯ ಭಾರತಿ(38), ಪ್ರಸನ್ನ(14), ಚೆನ್ನಕೇಶವ ರೆಡ್ಡಿ(12), ಪ್ರೇಮರಾಜು(35), ಅಂಕಯ್ಯ(40) ಎಂದು ಗುರುತಿಸಲಾಗಿದೆ. 
ತಿರುಪತಿ ಗ್ರಾಮೀಣ ಎಸ್ ಪಿ ಕೆಕೆಎನ್ ಅನ್ಬುರಾಜನ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com