ಸಂಸತ್ತಿನಲ್ಲಿ ತ್ರಿವಳಿ ತಲಾಖ್‍ ಮಸೂದೆಗೆ ಜೆಡಿ-ಯು ವಿರೋಧ

ಬಿಹಾರದಲ್ಲಿ ಆಡಳಿತ ನಡೆಸುತ್ತಿರುವ ಹಾಗೂ ಎನ್‍ಡಿಎ ಮೈತ್ರಿಕ್ಕೂಟದ ಪ್ರಮುಖ ಮೈತ್ರಿ ಪಕ್ಷವಾದ ಜೆಡಿ-ಯು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಲಾಖ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಪಾಟ್ನಾ: ಬಿಹಾರದಲ್ಲಿ ಆಡಳಿತ ನಡೆಸುತ್ತಿರುವ ಹಾಗೂ ಎನ್‍ಡಿಎ ಮೈತ್ರಿಕ್ಕೂಟದ ಪ್ರಮುಖ ಮೈತ್ರಿ ಪಕ್ಷವಾದ ಜೆಡಿ-ಯು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಲಾಖ್ ಮಸೂದೆಯನ್ನು ವಿರೋಧಿಸಲಿದೆ. 
ಜೆಡಿ-ಯು ಪ್ರಧಾನ ಕಾರ್ಯದರ್ಶಿ ಹಾಗೂ ಬಿಹಾರ ಕೈಗಾರಿಕಾ ಸಚಿವ ಶ್ಯಾಮ್ ರಜಾಕ್  ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,  ಸಂಸತ್ತಿನಲ್ಲಿ ತ್ರಿವಳಿ ತಾಲಾಖ್ ಮಸೂದೆಗೆ ತಮ್ಮ ಪಕ್ಷ ವಿರೋಧಿಸಲಿದೆ. ಈ ಹಿಂದೆಯೂ ಸರ್ಕಾರದ ಇಂತಹ ಪ್ರಯತ್ನಗಳನ್ನು ಜೆಡಿ-ಯು ವಿರೋಧಿಸಿದ್ದು, ಭವಿಷ್ಯದಲ್ಲೂ ಇದೇ ನಿಲುವು ತಳೆಯಲಾಗುವುದು ಎಂದರು.
ಜೆಡಿ-ಯು ವಿರೋಧದ ಕಾರಣದಿಂದಾಗಿಯೇ, ತ್ರಿವಳಿ ತಲಾಖ್‍ಗೆ ಸಂಬಂಧಿಸಿದ ಮಸೂದೆ ರಾಜ್ಯಸಭೆಯಲ್ಲಿ ಮಂಡಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ತ್ರಿವಳಿ ತಲಾಖ್ ಕುರಿತ ಜೆಡಿ-ಯು ನಿಲುವು ಮೊದಲಿನಿಂದಲೂ ಸ್ಪಷ್ಟವಾಗಿಯೇ ಇದೆ ಎಂದಿರುವ ಅವರು, ತ್ರಿವಳಿ ತಲಾಖ್‍  ಸಾಮಾಜಿಕ ವಿಷಯವಾಗಿದ್ದರಿಂದ ಸಂಬಂಧಿಸಿದ ಸಮುದಾಯ ಈ ಕುರಿತ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಈ ವಿಷಯವನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಬಿಡಬೇಕು ಎಂದು ಶ್ಯಾಮ್ ರಜಾಕ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com