ಬಿಹಾರ: ಎನ್ಸಿಫಾಲಿಟಿಸ್ ಸೋಂಕಿಗೆ 84 ಬಲಿ, 4 ಲಕ್ಷ ಪರಿಹಾರ ಘೋಷಿಸಿದ ಸಿಎಂ ನಿತೀಶ್ ಕುಮಾರ್!

ಬಿಹಾರದಲ್ಲಿ ಎನ್ಸಿಫಾಲಿಟಿಸ್ ಸೋಂಕು ವ್ಯಾಪಕವಾಗಿದ್ದು, ಸೋಂಕಿಗೆ ಬಲಿಯಾದ ಮಕ್ಕಳ ಸಂಖ್ಯೆ 84ಕ್ಕೆ ಏರಿಕೆಯಾಗಿದೆ. ಅಂತೆಯೇ ಸಿಎಂ ನಿತೀಶ್ ಕುಮಾರ್ ಸಾವನ್ನಪ್ಪಿದ ಮಕ್ಕಳ ಕುಟುಂಕ್ಕೆ ನಾಲ್ಕು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಾಟ್ನಾ: ಬಿಹಾರದಲ್ಲಿ ಎನ್ಸಿಫಾಲಿಟಿಸ್ ಸೋಂಕು ವ್ಯಾಪಕವಾಗಿದ್ದು, ಸೋಂಕಿಗೆ ಬಲಿಯಾದ ಮಕ್ಕಳ ಸಂಖ್ಯೆ 84ಕ್ಕೆ ಏರಿಕೆಯಾಗಿದೆ. ಅಂತೆಯೇ ಸಿಎಂ ನಿತೀಶ್ ಕುಮಾರ್ ಸಾವನ್ನಪ್ಪಿದ ಮಕ್ಕಳ ಕುಟುಂಕ್ಕೆ ನಾಲ್ಕು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಬಿಹಾರದಲ್ಲಿ ಬೇಸಿಗೆ ತಾಪಮಾನ ವ್ಯಾಪಕವಾಗಿ ಏರಿಕೆಯಾಗಿದ್ದು, ಇದೂ ಕೂಡ ಮಕ್ಕಳಲ್ಲಿ ಜ್ವರ ಹೆಚ್ಚಾಗಲು ಕಾರಣವಾಗಿದೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಿದುಳು ಸೋಂಕು ಮಕ್ಕಳಲ್ಲಿ ವ್ಯಾಪಕವಾಗಿದ್ದು, ಈ ವರೆಗೂ ಈ ಸೋಂಕಿಗೆ 84 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯವಾಗಿ ಇದನ್ನು ಚಮ್ಕಿ ಜ್ವರ ಎಂದು ಕರೆಯುತ್ತಾರೆ.
4 ಲಕ್ಷ ಪರಿಹಾರ ಘೋಷಣೆ
ಇನ್ನು ಎಇಎಸ್ ಸೋಂಕಿಗೆ ಬಲಿಯಾದವರ ಕುಟುಂಬಗಳಿಗೆ ಬಿಹಾರ ಸರ್ಕಾರ ನಾಲ್ಕು ಲಕ್ಷ ಪರಿಹಾರ ಘೋಷಣೆ ಮಾಡಿದೆ. ಈ ಬಗ್ಗೆ ಸಿಎಂ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಘೋಷಣೆ ಮಾಡಿದ್ದಾರೆ. ಮುಜಾಫರ್ ಪುರದಲ್ಲಿ ವೈದ್ಯಾಧಿಕಾರಿಗಳು ಹೈ ಅಲರ್ಟ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com