ಈಗಾಗಲೇ ಈ ಘಟಕಕ್ಕೆ ಕಳೆದ 2010ರಲ್ಲೇ ತಾವು ಅಡಿಪಾಯ ಹಾಕಿದ್ದು ಪ್ರಧಾನಿ ಮೋದಿ ಅವರು ಅವರು ತಾವೇ ಇದಕ್ಕೆ ಅಡಿಪಾಯ ಹಾಕುತ್ತಿರುವುದಾಗಿ ಹೇಳುವ ಮೂಲಕ ಜನರಿಗೆ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ರಾಹುಲ್ ಗಾಂಧಿ ಅವರು, ಪ್ರಿಯ ಪ್ರಧಾನ ಮಂತ್ರಿ ಜೀ, ಈಗಾಗಲೇ 2010 ರಲ್ಲಿ ಕಾರ್ಖಾನೆಗೆ ನಾನು ಅಡಿಪಾಯ ಹಾಕಿದ್ದೇನೆ ಎಂಬುದನ್ನು ಮರೆತು ಬಿಟ್ಟಿದ್ದೀರಾ.. ಸಣ್ಣ ಶಸ್ತ್ರಾಸ್ತ್ರಗಳ ಉತ್ಪಾದನೆಯು ಕಳೆದ ಹಲವಾರು ವರ್ಷಗಳಿಂದ ಕಾರ್ಖಾನೆಯಲ್ಲಿ ನಡೆಯುತ್ತಿದೆ ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ರಾಹುಲ್ ಕಿಡಿ ಕಾರಿದ್ದಾರೆ.