ಹೀನ ಕೃತ್ಯ: ಮೊದಲ ರಾತ್ರಿಯಂದೇ ಅಣ್ಣನ ಜೊತೆ ಸೇರಿ ಅತ್ತಿಗೆಯನ್ನು ರೇಪ್ ಮಾಡಿದ ಭಾಮೈದ!

ಜೀವನದ ಕುರಿತು ಆಶಾಗೋಪರವನ್ನೇ ಕಟ್ಟಿಕೊಂಡಿದ್ದ ನವ ವಧುವಿಗೆ ಮೊದಲ ರಾತ್ರಿಯಂದೆ ಗಂಡ ಹಾಗೂ ಆತನ ತಮ್ಮ ಇಬ್ಬರು ಸೇರಿಕೊಂಡು ಭೀಕರವಾಗಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮುಜಾಫರನಗರ: ಜೀವನದ ಕುರಿತು ಆಶಾಗೋಪರವನ್ನೇ ಕಟ್ಟಿಕೊಂಡಿದ್ದ ನವ ವಧುವಿಗೆ ಮೊದಲ ರಾತ್ರಿಯಂದೆ ಗಂಡ ಹಾಗೂ ಆತನ ತಮ್ಮ ಇಬ್ಬರು ಸೇರಿಕೊಂಡು ಭೀಕರವಾಗಿ ಅತ್ಯಾಚಾರ ಮಾಡಿದ್ದು ಪರಿಣಾಮ ತೀವ್ರ ರಕ್ತಸ್ರಾವದಿಂದ ನವ ವಧು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಉತ್ತರ ಪ್ರದೇಶ ಮುಜಾಫರನಗರದ ಹೊರಹೊಲಯದಲ್ಲಿರುವ ಗ್ರಾಮದಲ್ಲಿ ಈ ಘಟನೆ ನಡೆಸಿದೆ. ಮೊದಲ ದಿನದ ರಾತ್ರಿ ಗಂಡ ಹಾಗೂ ಭಾಮೈದ ಇಬ್ಬರು ಸೇರಿ ಅತ್ಯಾಚಾರ ನಡೆಸಿದ್ದಾರೆ. ಪರಿಣಾಮ ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಬೆಳಗ್ಗೆ ನೋವಿನಿಂದ ನರಳುತ್ತಿದ್ದ ನವ ವಧುವನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದ್ದು, ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.
ನವ ವಧುವಿನ ಪೋಷಕರ ದೂರಿನ ಮೇರೆಗೆ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ ವರದಕ್ಷಿಣೆಗೆ ಪೀಡಿಸುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com