ಅರುಣಾಚಲ ಪ್ರದೇಶದಲ್ಲಿ ಉಗ್ರ ದಾಳಿ: ಎನ್ಎನ್‌ಪಿ ಶಾಸಕ ಸೇರಿ 11 ಮಂದಿ ದುರ್ಮರಣ!

ಅರುಣಾಚಲ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದು ಎನ್ಎನ್‌ಪಿ ಶಾಸಕ ಸೇರಿ ಹನ್ನೊಂದು ಮಂದಿ ದುರ್ಮರಣ ಹೊಂದಿದ್ದಾರೆ.
ತಿರೋಂಗ್ ಅಬೆ
ತಿರೋಂಗ್ ಅಬೆ
Updated on
ಇಟ್ನಾನಗರ: ಅರುಣಾಚಲ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದು ಎನ್ಎನ್‌ಪಿ ಶಾಸಕ ಸೇರಿ ಹನ್ನೊಂದು ಮಂದಿ ದುರ್ಮರಣ ಹೊಂದಿದ್ದಾರೆ.
ಉಗ್ರರ ದಾಳಿಯಲ್ಲಿ ಕೋನ್ಸಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ಎನ್‌ಪಿ) ಶಾಸಕ ತಿರೋಂಗ್ ಅಬೋ, ಪುತ್ರ ಸೇರಿದಂತೆ ಹನ್ನೊಂದು ಮಂದಿ ಮೃತಪಟ್ಟಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಕೆ ಸಂಗಮ್ ದಾಳಿ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಅರುಣಾಚಲ ಪ್ರದೇಶದ ತಿರಪ್ ಜಿಲ್ಲೆಯ ಬೋಗ್ಪಾನಿ ಹಳ್ಳಿಯಲ್ಲಿ ಈ ದಾಳಿ ನಡೆದಿದೆ. ದಾಳಿಯ ಹಿಂದೆ ಎನ್ಎಸ್ಸಿಎನ್ ಉಗ್ರ ಸಂಘಟನೆಯ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಇನ್ನು ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ಈ ದಾಳಿ ನಡೆದಿರುವುದು ಆತಂಕ ಸೃಷ್ಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com