ದೆಹಲಿಯಲ್ಲಿ ಕೂಡ ಶಿವಸೇನೆ ಅಧಿಕಾರಕ್ಕೆ ಬಂದರೆ ಅಚ್ಚರಿಪಡಬೇಡಿ: ಸಂಜಯ್ ರಾವತ್ 

ಶಿವಸೇನೆ ದೆಹಲಿಯಲ್ಲಿ ಕೂಡ ಅಧಿಕಾರಕ್ಕೆ ಬಂದರೆ ಆಶ್ಚರ್ಯಪಡಬೇಡಿ ಎಂದು ಪಕ್ಷದ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಹೇಳಿದ್ದಾರೆ.
ಸಂಜಯ್ ರಾವತ್
ಸಂಜಯ್ ರಾವತ್
Updated on: 

ಮುಂಬೈ: ಶಿವಸೇನೆ ದೆಹಲಿಯಲ್ಲಿ ಕೂಡ ಅಧಿಕಾರಕ್ಕೆ ಬಂದರೆ ಆಶ್ಚರ್ಯಪಡಬೇಡಿ ಎಂದು ಪಕ್ಷದ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಹೇಳಿದ್ದಾರೆ.


ನಾವು ಸರ್ಕಾರ ರಚನೆ ಮಾಡುತ್ತೇವೆ ಎಂಬ ಮಾತನ್ನು ಮೊದಲ ದಿನದಿಂದಲೇ ಹೇಳುತ್ತಾ ಬಂದಿದ್ದೇನೆ, ನಮ್ಮ ಸೂರ್ಯಯಾನ ಮಂತ್ರಾಲಯದ 6ನೇ ಮಹಡಿಯಲ್ಲಿ ಸುರಕ್ಷಿತವಾಗಿ ಬಂದಿಳಿಯಲಿದೆ ಎಂದು ಹೇಳಿದ್ದೆ. ಆದರೆ ಎಲ್ಲರೂ ನಮ್ಮ ಮಾತಿಗೆ ನಗುತ್ತಿದ್ದರು. ಆದರೆ ಈಗ ನೋಡಿ, ನಮ್ಮ ಸೂರ್ಯಯಾನ ಸುರಕ್ಷಿತವಾಗಿ ಬಂದು ನಿಂತಿದೆ ಎಂದರು.


ಸೂರ್ಯಯಾನ ಸೇನೆ ದೆಹಲಿಯಲ್ಲಿ ಬಂದಿಳಿದರೆ ನೀವೆಲ್ಲ ಆಶ್ಚರ್ಯಪಡಬೇಡಿ ಎಂದರು. ಇಲ್ಲಿ ಸೂರ್ಯಯಾನ ಎಂದರೆ ಶಿವಸೇನೆಯ ನಾಯಕ ಎಂದರ್ಥ ಎಂದರು.


ಅಜಿತ್ ಪವಾರ್ ಬಗ್ಗೆ ಕೇಳಿದಾಗ, ನಾಳೆ ಸಿಎಂ ಪ್ರಮಾಣವಚನ ಸ್ವೀಕರಿಸುತ್ತಾರೆ. ಅಜಿತ್ ಪವಾರ್ ಅವರ ಪಾತ್ರ ಬಹಳ ಸ್ಪಷ್ಟವಾಗಿದೆ. ಕಳೆದ ಶನಿವಾರ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಅವರು ಮತ್ತೆ ಬರುತ್ತಾರೆ ಎಂದು ಹೇಳಿದ್ದೆ. ಅರ್ಥ ಮಾಡಿಕೊಳ್ಳಲು 100 ವರ್ಷ ಬೇಕಾಗಬಹುದು ಎಂದು ಕೂಡ ಹೇಳಿದ್ದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com