2022ರೊಳಗೆ ಭಾರತವನ್ನು ಕಾಶ್ಮೀರ-ಕನ್ಯಾಕುಮಾರಿವರೆಗೆ ಸಂಪರ್ಕಿಸುತ್ತೇವೆ: ರೈಲ್ವೇ ಸಚಿವ

2022ರ ಆಗಸ್ಟ್ 15ರೊಳಗಾಗಿ ಭಾರತವನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಂಪರ್ಕಿಸುವಂತೆ ಮಾಡುತ್ತೇವೆಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಗುರುವಾರ ಹೇಳಿದ್ದಾರೆ. 
ರೈಲ್ವೇ ಸಚಿವ ಪಿಯೂಷ್ ಗೋಯಲ್
ರೈಲ್ವೇ ಸಚಿವ ಪಿಯೂಷ್ ಗೋಯಲ್
Updated on: 

ನವದೆಹಲಿ: 2022ರ ಆಗಸ್ಟ್ 15ರೊಳಗಾಗಿ ಭಾರತವನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಂಪರ್ಕಿಸುವಂತೆ ಮಾಡುತ್ತೇವೆಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಗುರುವಾರ ಹೇಳಿದ್ದಾರೆ. 

ನವದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್'ಪ್ರೆಸ್ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕತ್ರಾದಿಂದ ಬನಿಹಾರ್ ವರೆಗಿನ ರೈಲ್ವೇ ಸಂಪರ್ಕವನ್ನು ಅತೀ ಶೀಘ್ರಗತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಛೆನಾಡ್ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 2022ರ ಆಗಸ್ಟ್ 15ರೊಳಗಾಗಿ ಭಾರತವನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸಂಪರ್ಕ ಮಾಡುವಂತೆ ಮಾಡುತ್ತೇವೆಂದು ಹೇಳಿದ್ದಾರೆ. 

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರವನ್ನು ರೈಲ್ವೇ ಸಚಿವ ಕೊಂಡಾಡಿದ್ದಾರೆ. 

ಅಮಿತ್ ಶಾ ಅವರು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕಾಶ್ಮೀರದಲ್ಲಿ ಜನರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಆಗಸ್ಟ್ 15ರಂದು ವಂದೇ ಭಾರತ್ ರೈಲು ದೇಶದ ಮೂಲೆಮೂಲೆಗೂ ತಲುಪಲಿದೆ ಎಂದು ತಿಳಿಸಿದ್ದಾರೆ. 

5,000 ರೈಲ್ವೇ ನಿಲ್ದಾಣಗಳಲ್ಲಿ ವೈಫೈ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ 6,500 ನಿಲ್ದಾಣಗಳಲ್ಲೂ ಸಂಪರ್ಕ ಕಲ್ಪಿಸಲಾಗುತ್ತದೆ ಎದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com