ಬೋಕಾರೋ: ಭಾರತ ಒಂದು ರಾಷ್ಟ್ರ, ಛತ್ರವಲ್ಲ. ದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರು ಹೊರ ಹೋಗಲೇಬೇಕೆಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಜೆಪಿ.ನಡ್ಡಾ ಅವರು ಕೇಂದ್ರದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್'ಪಿ) ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಅಕ್ರಮ ವಲಸಿಗರು ಹೊರ ಹೋಗುವ ಸಮಯ ಬಂದಿದೆ. ದೇಶದಲ್ಲಿ ವಲಸಿಗರು ವಾಸಿಸಲು ಅವಕಾಶವಿಲ್ಲ. ಹಿಂದೂಗಳು, ಜೈನರು, ಸಿಖ್ಖರು, ಕ್ರಿಶ್ಚಿಯನ್ನರಿಗೆ ಹೊರಗೆ ಕಿರುಕುಳ ನೀಡಲಾಗುತ್ತಿದೆ. ಭಾರತ ವಲಸಿಗರಿಗೆ ಆಶ್ರಯ ನೀಡಲಿದೆ. ಭಾರತ ಒಂದು ರಾಷ್ಟ್ರವೇ ಹೊರತು, ಛತ್ರವಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ವಿಧಿ ರದ್ಧತಿ, ಹ್ಯೂಸ್ಟನ್ ನಲ್ಲಿ ಪ್ರಧಾನಿ ಮೋದಿಯವರ ಭಾಷಣ, ಭ್ರಷ್ಟಾರಾದ ವಿರುದ್ದಧ ಸರ್ಕಾರದ ಹೋರಾಟದ ಕುರಿತಂತೆಯೂ ನಡ್ಡಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
Advertisement