'ಮನ್ ಕಿ ಬಾತ್', 'ಮೌನ್ ಕಿ ಬಾತ್' ಆಗಬಾರದು: ಪ್ರಧಾನಿ ಮೋದಿಗೆ ಶಶಿತರೂರ್

ದೇಶದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆ ಹಿಂಸಾಚಾರಗಳ ಬಗ್ಗೆ ಬಹಿರಂಗಪತ್ರ ಬರೆದ 49 ಮಂದಿ ಸೆಲೆಬ್ರೆಟಿಗಳ ವಿರುದ್ದ ಪ್ರಕರಣ ದಾಖಲಿಸಿರುವ ಕ್ರಮವನ್ನು ಕಾಂಗ್ರೆಸ್ ನಾಯಕ  ಶಶಿ ತರೂರ್ ವಿರೋಧಿಸಿದ್ದಾರೆ.
ಶಶಿ ತರೂರ್-ನರೇಂದ್ರ ಮೋದಿ
ಶಶಿ ತರೂರ್-ನರೇಂದ್ರ ಮೋದಿ
Updated on: 

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆ ಹಿಂಸಾಚಾರಗಳ ಬಗ್ಗೆ ಬಹಿರಂಗಪತ್ರ ಬರೆದ 49 ಮಂದಿ ಸೆಲೆಬ್ರೆಟಿಗಳ ವಿರುದ್ದ ಪ್ರಕರಣ ದಾಖಲಿಸಿರುವ ಕ್ರಮವನ್ನು ಕಾಂಗ್ರೆಸ್ ನಾಯಕ  ಶಶಿ ತರೂರ್ ವಿರೋಧಿಸಿದ್ದಾರೆ.

ಈ ಸಂಬಂಧ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಎರಡು ಪುಟಗಳ ಬಹಿರಂಗಪತ್ರ ಪತ್ರ ಬರೆದಿದ್ದಾರೆ. ಭಿನ್ನಮತವನ್ನು ಗೌರವಿಸುವ ಕುರಿತು ಪ್ರಧಾನಿ ತಮ್ಮ ಸ್ಪಷ್ಟ ನಿಲುವುವನ್ನು ದೇಶದ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭಿನ್ನಾಭಿಪ್ರಾಯಗಳ ವಿಷಯದಲ್ಲಿ ಪ್ರಧಾನಿ ಮತ್ತು ಸರ್ಕಾರದ ವಿರುದ್ಧ ಟೀಕೆಗಳು ಎದುರಾದಾಗ ತಾನು ಅಭಿವ್ಯಕ್ತಿ ಸ್ವಾತಂತ್ರ್ಯ ಕಾಪಾಡಲು ಬದ್ಧನಾಗಿರುತ್ತೇನೆ ಎಂದು ದೇಶಕ್ಕೆ ಭರವಸೆ ನೀಡಬೇಕು ಎಂದು ಶಶಿತರೂರ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com