ಗುಜರಾತ್ : ಐದು ಪಾಕಿಸ್ತಾನಿ ಮೀನುಗಾರಿಕಾ ಬೋಟುಗಳ ವಶ

ಗುಜರಾತಿನ ಹರಮಿ ನುಲ್ಲಾ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಐದು ಪಾಕಿಸ್ತಾನದ ಮೀನುಗಾರಿಕಾ ಬೋಟುಗಳನ್ನು ವಶಕ್ಕೆ ಪಡೆದುಕೊಂಡಿವೆ.
ಪಾಕಿಸ್ತಾನದ ಬೋಟುಗಳು
ಪಾಕಿಸ್ತಾನದ ಬೋಟುಗಳು
Updated on

ಬುಜ್ : ಗುಜರಾತಿನ ಹರಮಿ ನುಲ್ಲಾ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಐದು ಪಾಕಿಸ್ತಾನದ ಮೀನುಗಾರಿಕಾ ಬೋಟುಗಳನ್ನು ವಶಕ್ಕೆ ಪಡೆದುಕೊಂಡಿವೆ.

ಶೋಧ ಕಾರ್ಯಾಚರಣೆ ವೇಳೆಯಲ್ಲಿ ಈ ಬೋಟುಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಗಡಿ ಭದ್ರತಾ ಪಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. 

ಅಕ್ಟೋಬರ್ 11 ರಂದು ರಾತ್ರಿ 10-45 ರ ಸುಮಾರಿನಲ್ಲಿ ಹರಮಿ ನುಲ್ಲಾ ಪ್ರದೇಶದಲ್ಲಿ ಪಾಕಿಸ್ತಾನಕ್ಕೆ ಸೇರಿದ ಐದು ಮರದ ಮೀನುಗಾರಿಕಾ ಬೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಲಾಗಿದೆ. 

ಕಳೆದ ವಾರ ಪಾಕಿಸ್ತಾನದ ಎರಡು ಮರದ ಮೀನುಗಾರಿಕಾ ಬೋಟುಗಳನ್ನು ಗಡಿ ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com