ಪಾಕಿಸ್ತಾನದ ಅವಿಭಾಜ್ಯ ಅಂಗವನ್ನು ಪ್ರತ್ಯೇಕಗೊಳಿಸಿದ್ದು ಕಾಂಗ್ರೆಸ್: ಸಿಬಲ್ 

ಹರ್ಯಾಣ-ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. 
ಪಾಕಿಸ್ತಾನದ ಅವಿಭಾಜ್ಯ ಅಂಗವನ್ನು ಪ್ರತ್ಯೇಕಗೊಳಿಸಿದ್ದು ಕಾಂಗ್ರೆಸ್: ಸಿಬಲ್
ಪಾಕಿಸ್ತಾನದ ಅವಿಭಾಜ್ಯ ಅಂಗವನ್ನು ಪ್ರತ್ಯೇಕಗೊಳಿಸಿದ್ದು ಕಾಂಗ್ರೆಸ್: ಸಿಬಲ್
Updated on: 

ನವದೆಹಲಿ: ಹರ್ಯಾಣ-ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. 

ಚುನಾವಣಾ ಪ್ರಚಾರ ಸಭೆಗಳಲ್ಲಿ ಆರ್ಟಿಕಲ್ 370ಯನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ತಿರುಗೇಟು ನೀಡಿದ್ದು, ಪಾಕಿಸ್ತಾನದ ಅವಿಭಾಜ್ಯ ಅಂಗವನ್ನು ಪ್ರತ್ಯೇಕಗೊಳಿಸಿದ್ದು ಕಾಂಗ್ರೆಸ್, ಈ ಕಟು ಸತ್ಯವನ್ನು ಮೋದಿ ಚುನಾವಣಾ ಪ್ರಚಾರಗಳಲ್ಲಿ ಹೇಳಲಿ ಎಂದು ಸವಾಲು ಹಾಕಿದ್ದಾರೆ. 

ಕಾಂಗ್ರೆಸ್ ಪಾಕ್ ನ ಅವಿಭಾಜ್ಯ ಅಂಗವನ್ನು ಪ್ರತ್ಯೇಕಗೊಳಿಸಿದ್ದಾಗ ಮೋದಿ ಎಲ್ಲಿದ್ದರು ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ. 

ಮೋದಿಗೆ ಯಾವಾಗಲೂ ಆರ್ಟಿಕಲ್ 370 ಬಗ್ಗೆಯೇ ಚಿಂತೆಯಾಗಿದೆ ಆದರೆ ರಾಜ್ಯಗಳ ಪೌಷ್ಟಿಕಾಂಶ ಹೆಚ್ಚಿಸುವ ಬಗ್ಗೆ ಮಾತನಾಡುವ ಆರ್ಟಿಕಲ್ 47 ಬಗ್ಗೆ ಮೋದಿ ಯೋಚಿಸುವುದಿಲ್ಲ ಎಂದು ಸಿಬಲ್ ವಾಗ್ದಾಳಿ ನಡೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com