ಹಿಂದುತ್ವವಾದಿ ಕಮಲೇಶ್ ತಿವಾರಿ ಹತ್ಯೆ: 15 ಬಾರಿ ಚೂರಿ ಇರಿತ, ತಲೆಗೆ ಗುಂಡು!

ಹಿಂದುತ್ವವಾದಿ ಕಮಲೇಶ್ ತಿವಾರಿಗೆ 15 ಬಾರಿ ಚೂರಿ ಇರಿದು ಕೊನೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ಆಘಾತಕಾರಿ ಸುದ್ದಿ ಮರಣೋತ್ತರ ಪರೀಕ್ಷಿಯಿಂದ ತಿಳಿದುಬಂದಿದೆ.
ಕಮಲೇಶ್ ತಿವಾರಿ
ಕಮಲೇಶ್ ತಿವಾರಿ
Updated on

ಲಖನೌ: ಹಿಂದುತ್ವವಾದಿ ಕಮಲೇಶ್ ತಿವಾರಿಗೆ 15 ಬಾರಿ ಚೂರಿ ಇರಿದು ಕೊನೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ಆಘಾತಕಾರಿ ಸುದ್ದಿ ಮರಣೋತ್ತರ ಪರೀಕ್ಷಿಯಿಂದ ತಿಳಿದುಬಂದಿದೆ.

ಅಕ್ಟೋಬರ್ 18ರಂದು ಲಖನೌದ ತಿವಾರಿ ಮನೆಯಲ್ಲಿ ಕೊಲೆಗಾರರು ಕಮಲೇಶ್ ತಿವಾರಿ ಅವರ ಕತ್ತನ್ನು ಎರಡು ಬಾರಿ ಸೀಳಿದಿದ್ದಾರೆ. ನಂತರ ಹೊಟ್ಟೆ ಮತ್ತು ಎದೆ ಭಾಗಕ್ಕೆ ಚೂರಿಯಿಂದ ಇರಿದಿದ್ದಾರೆ. ಕೊನೆಗೆ ತಲೆಗೆ ಗುಂಡಿಕ್ಕಿದ್ದಾರೆ ಎಂದು ತಿಳಿದುಬಂದಿದೆ. 

ಗುಜರಾತ್ ಪೊಲೀಸರು ರಾಜಸ್ಥಾನದಿಂದ ರಾಜ್ಯ ಪ್ರವೇಶಿಸುತ್ತಿದ್ದ ಕಮಲೇಶ್ ತಿವಾರಿ ಹತ್ಯೆ ಆರೋಪಿಗಳಾದ ಅಶ್ಫಕ್ ಹುಸೈನ್ ಜಾಕೀರ್ ಹುಸ್ಸೇನ್ ಶೇಖ್ (34) ಮತ್ತು ಮೊಯಿನುದ್ದೀನ್ ಖುರ್ಷಿದ್ ಪಠಾಣ್(27)ರನ್ನು ಶಾಮ್ಲಾಜಿಯಲ್ಲಿ ಬಂಧಿಸಿದ್ದರು. 

ಕಮಲೇಶ್ ತಿವಾರಿ ಅವರು ಪ್ರವಾದಿ ಮಹಮ್ಮದ್ ಅವರ ಕುರಿತಾಗಿ ಕೀಳುಮಟ್ಟದ ಹೇಳಿಕೆ ನೀಡಿದ ಕಾರಣಕ್ಕೆ ಅವರನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳಿಬ್ಬರು ತಪ್ಪೊಪ್ಪಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಗೆಯಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com