ಜನರಲ್ಲಿ ಜಲ ಜಾಗೃತಿ ಮೂಡದಿದ್ದರೆ ಚೆನ್ನೈ, ಬೆಂಗಳೂರು ನಗರಗಳು ಕೇಪ್ ಟೌನ್ ಆಗಲಿದೆ:  ಜಲ ಶಕ್ತಿ ಸಚಿವ

 ಭಾರತದಲ್ಲಿ ಶೀಘ್ರವೇ ಜಲಕಂಟಕ ಎದುರಾಗಲಿದೆ. ದೇಶದಲ್ಲಿ ನೀರಿನ ಲಭ್ಯತೆ  ತೀವ್ರವಾಗಿ ಕುಸಿದಿದೆ ಸಾರ್ವಜನಿಕರು ನೀರಿನ ಉಳಿತಾಯದ ಕುರಿತಂತೆ ಗಂಭೀರ ಕಾಳಜಿ ವಹಿಸದೆ ಹೋದಲ್ಲಿ ಚೆನ್ನೈ ಮತ್ತು ಬೆಂಗಳೂರು ನಗರಗಳು ಮುಂದಿನ ದಿನಗಳಲ್ಲಿ "ಕೇಪ್ ಟೌನ್" ಆಗಲಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಎಚ್ಚರಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಭಾರತದಲ್ಲಿ ಶೀಘ್ರವೇ ಜಲಕಂಟಕ ಎದುರಾಗಲಿದೆ. ದೇಶದಲ್ಲಿ ನೀರಿನ ಲಭ್ಯತೆ  ತೀವ್ರವಾಗಿ ಕುಸಿದಿದೆ ಸಾರ್ವಜನಿಕರು ನೀರಿನ ಉಳಿತಾಯದ ಕುರಿತಂತೆ ಗಂಭೀರ ಕಾಳಜಿ ವಹಿಸದೆ ಹೋದಲ್ಲಿ ಚೆನ್ನೈ ಮತ್ತು ಬೆಂಗಳೂರು ನಗರಗಳು ಮುಂದಿನ ದಿನಗಳಲ್ಲಿ "ಕೇಪ್ ಟೌನ್" ಆಗಲಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಎಚ್ಚರಿಸಿದ್ದಾರೆ. 

13ನೇ ವರ್ಲ್ಡ್ ಆಕ್ವಾ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಚಿವರು, ಮನೆಯಲ್ಲಿ ನಡೆಯುವ ಚರ್ಚೆಗಳು ಸಿನಿಮಾ, ಶಾಪಿಂಗ್ ನಂತಹಾ ವಿಷಯಕ್ಕೆ ಮಾತ್ರವೇ ಸೀಮಿತವಾಗಬಾರದು ಪರಿಸರ ಮತ್ತು ನೀರಿನ ಸಂಬಂಧ ಸಹ ಚರ್ಚೆಗಳು ನಡೆಯಬೇಕಿದೆ. ಹಾಗೇ ಜಲ ಸಮಸ್ಯೆಯ ಬಗೆಗೆ ಸಹ ಕೌಟುಂಬಿಕ ಮಾತುಕತೆಯಲ್ಲಿ ವಿಮರ್ಶೆಗಳು ಆಗಬೇಕಿದೆ ಎಂದರು.

ಭಾರತಕ್ಕೆ ಸ್ವಾತಂತ್ರ್ಯಸಿಕ್ಕ ಸಮಯದಲ್ಲಿ ತಲಾ ನೀರಿನ ಲಭ್ಯತೆಯು 5,000 ಘನ ಮೀಟರ್‌ ಇದ್ದದ್ದು ಇದೀಗ 1,540 ಘನ ಮೀಟರ್‌ಗೆ ಇಳಿದಿದೆ ಎಂದು ಶೇಖಾವತ್ ಹೇಳಿದರು.

"ಜನಸಂಖ್ಯೆ ಏರಿಕೆಯಾಗುತ್ತಿದ್ದು ನೀರಿನ ಲಭ್ಯತೆ ಇಳಿಕೆಯಾಗುತ್ತಾ ಸಾಗಿದರೆ ಚೆನ್ನೈ ಮತ್ತು ಬೆಂಗಳೂರು ಮಾತ್ರವಲ್ಲ ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗ ಇದರ ಪರಿಣಾಮ ಎದುರಿಸಬೇಕಾಗುವುದು. ಅದರಲ್ಲಿಯೂ ಚೆನ್ನೈ, ಬೆಂಗಳೂರು ನಗರಗಳು ದಕ್ಷಿಣ ಆಫ್ರಿಕಾ ರಾಜಧಾನಿ ಕೇಪ್ ಟೌನ್ ಆಗಲಿದೆ."

ಕೇಪ್ ಟೌನ್ ನಲ್ಲಿ ನೀರಿನ ಬಿಕ್ಕಟ್ಟು 2017-18ರಲ್ಲಿ ಉತ್ತುಂಗಕ್ಕೇರಿತ್ತು. ಆ ಬಳಿಕ ಅಲ್ಲಿನ ಆಡಳಿತ "ಡೇ ಝೀರೋ"  ಮಾದರಿಯನ್ನು ಪರಿಚಯಿಸಿತು. ನೀರಿನ ಬಳಕೆಯನ್ನು ನಿರ್ವಹಿಸುವಲ್ಲಿ ಎಲ್ಲರ ಗಮನವನ್ನು ಕೇಂದ್ರೀಕರಿಸಲು ಬಂದರು ನಗರಿ ಟ್ಯಾಪ್ (ನಲ್ಲಿ) ಆರಿಸಿ ಗಮನ ಸೆಳೆದಿತ್ತು.

ಶೀಘ್ರ ನಗರೀಕರಣ, ಬೆಳೆಯುತ್ತಿರುವ ಜನಸಂಖ್ಯೆ ಮತ್ತುಕಳಪೆ ನೀರಿನ ನಿರ್ವಹಣೆ ಅಂತರ್ಜಲ ಮಟ್ಟ ಕುಸಿಯಲು ಮತ್ತು ಕೆರೆ, ನದಿಗಳು ಷಕಾರಿಯಾಗಲು ಕಾರಣವಾಗಿವೆ, ಬೆಂಗಳೂರಿನಲ್ಲಿ ಕೆರೆಗಳಲ್ಲಿ ವಿಷಕಾರಿ ನೊರೆ ತುಂಬಿದೆ ಎಂದು  ವರದಿಗಳು ತಿಳಿಸಿವೆ.

"ಭಾರತದಲ್ಲಿ ಜನರು ನದಿಗಳನ್ನು ಪೂಜಿಸುತ್ತಾರೆ. ಆದರೂ, ಇದು ಹೆಚ್ಚು ಕಲುಷಿತವಾದ ನೀರಿನ ಸಂಪನ್ಮೂಲಗಳನ್ನು ಹೊಂದಿದೆ" ಎಂದು ಸಚಿವರು ಹೇಳಿದರು. ಮಳೆಯ ಮೂಲಕ ಭಾರತಕ್ಕೆ ವರ್ಷಕ್ಕೆ ಸರಾಸರಿ 1,068 ಮಿ.ಮೀ ಮಳೆ ಮತ್ತು ವರ್ಷಕ್ಕೆ 4,000 ಮಿಲಿಯನ್ ಘನ ಮೀಟರ್ ನೀರು ಸಿಗುತ್ತದೆ, ಆದರೂ ಇದು ನೀರಿನ ಕೊರತೆಯಿರುವ ದೇಶ ಎಂದು ಕೇಂದ್ರ ಸಚಿವರು ಹೇಳಿದರು.ವರ್ಷಕ್ಕೆ 100 ಮಿ.ಮೀ ಮಳೆಯಾಗುವ ಇಸ್ರೇಲ್ ನಲ್ಲಿ ನೀರು ಸಮೃದ್ಧವಾಗಿದೆ ಮತ್ತು ಸಂಪನ್ಮೂಲವನ್ನು ರಫ್ತು ಮಾಡುತ್ತದೆ. "ಭಾರತದಲ್ಲಿ, ಜನರು ಹಕ್ಕುಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ ಮತ್ತು ಜವಾಬ್ದಾರಿಗಳ ಬಗ್ಗೆ ಕಡಿಮೆ ಮಾತನಾಡುತ್ತಾರೆ. ಸರ್ಕಾರವು ಖಂಡಿತವಾಗಿಯೂ ಜವಾಬ್ದಾರಿಯುತವಾಗಿದೆ. ಆದರೆ ನೀರಿನ ಉಳಿಕೆಯಂತಹಾ ವಿಚಾರಗಳು ಜನರ ಮತ್ತು ಉದ್ಯಮದ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದರು.ಜನರು ನೈಸರ್ಗಿಕ ಸಂಪನ್ಮೂಲಗಳ ಪಾಲಕರಾಗಿದ್ದಾಗ ಎಲ್ಲವೂ ಪರಿಪೂರ್ಣವಾಗಿರಲಿದೆ ಎಂದು ಶೇಖಾವತ್ ಹೇಳಿದರು.

"ನಾವು ನೈಸರ್ಗಿಕ ಸಂಪನ್ಮೂಲಗಳ ಮಾಲೀಕರು ಎಂದು ಪರಿಗಣಿಸಲು ಪ್ರಾರಂಭಿಸಿದಾಗ ಸಮಸ್ಯೆ ಪ್ರಾರಂಭವಾಯಿತು.""ಭಾರತವು ವಿಶ್ವದ ಅತ್ಯಂತ ಅಂತರ್ಜಲ-ಅವಲಂಬಿತ ದೇಶವಾಗಿದೆ. ಆದರೂ, ಅದರ ಒಟ್ಟು ನೀರು ಉಳಿಸಿಕೊಳ್ಳುವ ಸಾಮರ್ಥ್ಯ 300 ದಶಲಕ್ಷ ಘನ ಮೀಟರ್‌ಗಿಂತ ಕಡಿಮೆಯಿದೆ" ಎಂದು ಸಚಿವರು ಹೇಳಿದರು, ನೀರನ್ನು ಸಂರಕ್ಷಿಸುವ ಮತ್ತು ಜಲಚರಗಳನ್ನು ಪುನರ್ಭರ್ತಿ ಮಾಡುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com