ಮುಂಬೈನಲ್ಲಿ ಭಾರಿ ಮಳೆ: ಕರ್ತವ್ಯನಿರತ ಇಬ್ಬರು ಬಿಎಂಸಿ ಸಿಬ್ಬಂದಿ ಸಾವು

ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆ ಭಾರಿ ಮಳೆಯಾಗುತ್ತಿದ್ದು, ನೀರಿನಲ್ಲಿ ಕೊಚ್ಚಿಹೊಗಿ ಕರ್ತವ್ಯನಿರತ ಇಬ್ಬರು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಪಿ) ಸಿಬ್ಬಂದಿ ಮೃತಪಟ್ಟಿರುವ ದಾರುಣ....
ಮುಂಬೈನಲ್ಲಿ ಭಾರಿ ಮಳೆ
ಮುಂಬೈನಲ್ಲಿ ಭಾರಿ ಮಳೆ
Updated on: 

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆ ಭಾರಿ ಮಳೆಯಾಗುತ್ತಿದ್ದು, ನೀರಿನಲ್ಲಿ ಕೊಚ್ಚಿಹೊಗಿ ಕರ್ತವ್ಯನಿರತ ಇಬ್ಬರು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಪಿ) ಸಿಬ್ಬಂದಿ ಮೃತಪಟ್ಟಿರುವ ದಾರುಣ ಘಟನೆ ಪಶ್ಚಿಮ ಉಪನಗರದ ಗೊರೆಗಾಂವ್ ನಲ್ಲಿ ನಡೆದಿದೆ.

ನಿನ್ನೆ ಸಂಜೆ ಸಿದ್ಧಾರ್ಥ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ವಿಜಯೇಂದ್ರ ಸರ್ದಾರ್ ಬಗ್ಡಿ(36) ಮತ್ತು ಜಗದೀಶ್ ಪರ್ಮಾರ್(54) ಎಂದು ಗುರುತಿಸಲಾಗಿದೆ. 

ನೀರಿನಲ್ಲಿ ಕೊಚ್ಚಿಹೊಗಿದ್ದ ಈ ಇಬ್ಬರನ್ನು ಪತ್ತೆಹಚ್ಚಿ, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದಾರಿ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com