ಮಳೆ ಆಗ್ಲಿ ಅಂತ ಮದ್ವೆ... ಜಾಸ್ತಿ ಮಳೆ ಆಯ್ತು ಅಂತ 2 ತಿಂಗಳಲ್ಲೇ ವಿಚ್ಛೇದನ; ವಿವಾಹಿತ ಕಪ್ಪೆಗಳ ನೋವು ಕೇಳೋರ್ಯಾರು?

ಮಳೆ ಆಗಲಿ ಎಂದು ಅದ್ಧೂರಿ ವಿವಾಹ ಮಾಡಿಸಿದ್ದ ಗ್ರಾಮಸ್ಥರು ಇದೀಗ ಪ್ರವಾಹವಾಯಿತು ಎಂದು ವಿವಾಹಿತ ಕಪ್ಪೆಗಳಿಗೆ ವಿಚ್ಛೇದನ ಕೊಡಿಸಿರುವ ವಿಲಕ್ಷಣ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭೋಪಾಲ್: ಮಳೆ ಆಗಲಿ ಎಂದು ಅದ್ಧೂರಿ ವಿವಾಹ ಮಾಡಿಸಿದ್ದ ಗ್ರಾಮಸ್ಥರು ಇದೀಗ ಪ್ರವಾಹವಾಯಿತು ಎಂದು ವಿವಾಹಿತ ಕಪ್ಪೆಗಳಿಗೆ ವಿಚ್ಛೇದನ ಕೊಡಿಸಿರುವ ವಿಲಕ್ಷಣ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಈಗ್ಗೆ 2 ತಿಂಗಳ ಹಿಂದೆ ಅಂದರೆ ಕಳೆದ ಜುಲೈ 19ರಂದು ಬರ ಪೀಡಿತ ಭೋಪಾಲ್ ನಲ್ಲಿ ಅದ್ದೂರಿಯಾಗಿ ಎರಡು ಕಪ್ಪೆಗಳ ವಿವಾಹ ಮಾಡಿಸಲಾಗಿತ್ತು. ಕಪ್ಪೆಗಳ ಮದುವೆ ಮಾಡಿದರೆ ಇಂದ್ರ ದೇವ ಖುಷಿಗೊಂಡು ಮಳೆ ಸುರಿಸುತ್ತಾನವೆ ಎಂಬುದು ಇಲ್ಲಿನ ಸ್ಥಳೀಯರ ನಂಬಿಕೆಯಾಗಿತ್ತು. ಇದಾದ ಬಳಿಕ ಕಾಕತಾಳಿಯವೇನೋ ಎಂಬಂತೆ ಭೋಪಾಲ್ ಮಾತ್ರವಲ್ಲದೇ ಇಡೀ ಮಧ್ಯ ಪ್ರದೇಶದಾದ್ಯಂತ ಭಾರಿ ಮಳೆ ಸುರಿದಿತ್ತು. ಸೆಪ್ಟೆಂಬರ್ 11ರ ಹೊತ್ತಿಗೆ ಮಧ್ಯ ಪ್ರದೇಶದಲ್ಲಿ ಬರ ಹೋಗಿ ಪ್ರವಾಹ ಪರಿಸ್ಥಿತಿ  ನಿರ್ಮಾಣವಾಗಿದ್ದು, ಈ ವರೆಗೂ ಶೇ.26ರಷ್ಟು ಮಳೆಯಾಗಿದೆ. ಅಲ್ಲದೆ ಈ ಭಾರಿ ಮಳೆ ಮಧ್ಯ ಪ್ರದೇಶದ 13 ವರ್ಷಗಳ ಹಿಂದಿನ ದಾಖಲೆಯನ್ನೂ ಮುರಿದಿದೆ.

ಅಲ್ಲದೆ ಕಳೆದ 48 ಗಂಟೆಗಳಲ್ಲಿ ಭೋಪಾಲ್ ನಲ್ಲಿ ದಾಖಲೆ 48.ಮಿಮಿ ಮಳೆಯಾಗಿದ್ದು, ಇಲ್ಲಿನ ಭೋಪಾಲ್ ಕಲಿಯಾಸೋಟ್ ಅಣೆಕಟ್ಟು ಮತ್ತು ಭದ್ದಭಾ ಅಣೆಕಟ್ಟುಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮ ಎರಡೂ ಡ್ಯಾಂಗಳಿಂದ ನೀರನ್ನು ಹೊರಗೆ ಬಿಡಲಾಗುತ್ತಿದ್ದು, ಪರಿಣಾಮ ಸ್ಥಳೀಯ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ.

ಇನ್ನು ಭಾರಿ ಮಳೆ ಮತ್ತು ಪ್ರವಾಹ ತಡೆಯುವ ನಿಟ್ಟಿನಲ್ಲಿ ಈ ಹಿಂದೆ ಯಾವ ಗ್ರಾಮಸ್ಥರು ಕಪ್ಪೆಗಳಿಗೆ ಮದುವೆ ಮಾಡಿಸಿದ್ದರೋ ಇದೀಗ ಅದೇ ಗ್ರಾಮಸ್ಥರೇ ಮಳೆ ನಿಲ್ಲಲಿ ಎಂದು ಕಪ್ಪೆಗಳಿಗೆ ವಿಚ್ಛೇದನ ಕೊಡಿಸಿದ್ದಾರೆ. ಇಲ್ಲಿನ ಇಂದ್ರಪುರಿ ಪ್ರಾಂತ್ಯದ ಓಂ ಶಿವಸೇನಾ ಮಂಡಲ್ ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ವಿಚ್ಛೇದನ ಕೊಡಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com