ನಾನು ಇನ್ನೂ 74 ವರ್ಷದ ಯುವಕ; ಪಿ ಚಿದಂಬರಂ 

ಹಿತೈಷಿಗಳ ಹಾರೈಕೆಯಿಂದ ನಾನು ಇನ್ನೂ 74 ವರ್ಷದ ಯುವಕನೆಂದು ನನಗೆ ಭಾಸವಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಭ್ರಷ್ಟಾಚಾರ ಆರೋಪದಲ್ಲಿ ಜೈಲಿನಲ್ಲಿರುವ ಪಿ ಚಿದಂಬರಂ ಹೇಳಿದ್ದಾರೆ. 
ಪಿ ಚಿದಂಬರಂ
ಪಿ ಚಿದಂಬರಂ
Updated on: 

ನವದೆಹಲಿ: ಹಿತೈಷಿಗಳ ಹಾರೈಕೆಯಿಂದ ನಾನು ಇನ್ನೂ 74 ವರ್ಷದ ಯುವಕನೆಂದು ನನಗೆ ಭಾಸವಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಭ್ರಷ್ಟಾಚಾರ ಆರೋಪದಲ್ಲಿ ಜೈಲಿನಲ್ಲಿರುವ ಪಿ ಚಿದಂಬರಂ ಹೇಳಿದ್ದಾರೆ.


ಇಂದು ಸೋಮವಾರ ಅವರ 74ನೇ ಹುಟ್ಟುಹಬ್ಬ. ಅವರ ಹುಟ್ಟುಹಬ್ಬ ಸಂದರ್ಭದಲ್ಲಿ ಅವರ ಮಾತುಗಳನ್ನು ಕುಟುಂಬ ಸದಸ್ಯರ ಮೂಲಕ ಟ್ವೀಟ್ ಮಾಡಿಸಿ ಅಭಿಮಾನಿಗಳು, ಹಿತೈಷಿಗಳಲ್ಲಿ ಹಂಚಿಕೊಂಡಿದ್ದಾರೆ. ಈ ದಿನ ದೇಶದ ಆರ್ಥಿಕತೆ ಬಗ್ಗೆ ನನ್ನ ಮನಸ್ಸಿನಲ್ಲಿ ಯೋಚನೆಗಳು ಬರುತ್ತಿವೆ ಎಂದಿದ್ದಾರೆ ಚಿದಂಬರಂ.


ತಿಹಾರ್ ಜೈಲಿನಲ್ಲಿರುವ ಚಿದಂಬರಂ ಅವರಿಗೆ ಎಂದಿನಂತೆ ಕಾಂಗ್ರೆಸ್ ನಾಯಕರು, ಸಹೋದ್ಯೋಗಿಗಳು, ಕುಟುಂಬಸ್ಥರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.ತಮಗೆ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ ಚಿದಂಬರಂ ತಮ್ಮ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com