ಕ್ರಿಮಿನಲ್ ಕೇಸ್ ತನಿಖೆ ವೇಳೆ ಪೊಲೀಸರು ಸ್ಥಿರಾಸ್ಥಿಗಳನ್ನು ಜಪ್ತಿ ಮಾಡುವಂತಿಲ್ಲ: ಸುಪ್ರೀಂ
ನವದೆಹಲಿ: ಕ್ರಿಮಿನಲ್ ಕೇಸ್ ಗಳ ತನಿಖೆ ವೇಳೆ ಪೊಲೀಸರು ಆರೋಪಿಗಳ ಸ್ಥಿರಾಸ್ತಿಗಳನ್ನು ಜಪ್ತಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಆದೇಶಿಸಿದೆ.
ನ್ಯಾಯಮೂರ್ತಿ ರಂಜನ್ ಗಗೋಯ್ ಮತ್ತು ದೀಪಕ್ ಮಿಶ್ರಾ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸೆಕ್ಷನ್ 102ರ ಸಿಆರ್ ಪಿಸಿ ಪ್ರಕಾರ, ಕ್ರಿಮಿನಲ್ ಪ್ರಕರಣಗಳ ತನಿಖೆ ವೇಳೆ ಪೊಲೀಸರಿಗೆ ಸ್ಥಿರಾಸ್ಥಿಗಳನ್ನು ಜಪ್ತಿ ಮಾಡುವ ಅಧಿಕಾರ ಇರುವುದಿಲ್ಲ ಎಂದು ಹೇಳಿದೆ.
ನ್ಯಾಯಪೀಠದ ತೀರ್ಪನ್ನು ಓದಿದ ನ್ಯಾಯಮೂರ್ತಿ ಖನ್ನಾ, ಇದು ಸರ್ವ ಸಮ್ಮತವಾದ ತೀರ್ಪು ಎಂದು ಹೇಳಿದ ಅವರು ಹೆಚ್ಚುವರಿ ಕಾರಣಗಳನ್ನು ನೀಡಿದ್ದಾರೆ.
ಸೆಕ್ಷನ್ 102 ಕ್ರಿಮಿನಲ್ ಪ್ರೊಸೀಜರ್ ಕೋಡ್ ನಲ್ಲಿ ಕ್ರಿಮಿನಲ್ ಕೇಸ್ ತನಿಖೆ ವೇಳೆ ಪೊಲೀಸರಿಗೆ ಸ್ಥಿರಾಸ್ತಿ ಸೀಜ್ ಮಾಡುವ ಅವಕಾಶ ಕೊಡಲಾಗಿತ್ತು. ಪೊಲೀಸರಿಗೆ ಸ್ಥಿರಾಸ್ತಿ ಜಪ್ತಿ ಮಾಡುವ ಅಧಿಕಾರವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ,ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ