ಹೈದರಾಬಾದ್‌: ಸತತ ಮಳೆ, ಕಾಲುವೆ ಗೋಡೆ ಕುಸಿದು 200 ಮನೆಗಳಿಗೆ ನುಗ್ಗಿದ ನೀರು 

ಮಳೆಗೆಕಟ್ಟಡದೊಳಗೆ ಒಳಗೆ ನೀರು ನುಗ್ಗಿ ಕಾರು ಮುಳುಗಿರುವುದು
ಮಳೆಗೆಕಟ್ಟಡದೊಳಗೆ ಒಳಗೆ ನೀರು ನುಗ್ಗಿ ಕಾರು ಮುಳುಗಿರುವುದು

ಹೈದರಾಬಾದ್: ಭಾರೀ ಮಳೆಗೆ ಇಲ್ಲಿನ ಹುಸೇನ್ ಸಾಗರ ಕೆರೆಗೆ ಸಂಪರ್ಕ ಹೊಂದಿರುವ ಕಾಲುವೆಯ ರಕ್ಷಣಾ ಗೋಡೆ ಕುಸಿದು ಅಕ್ಕಪಕ್ಕದಲ್ಲಿದ್ದ ಸುಮಾರು 200 ಮನೆಗಳಿಗೆ ನೀರು ನುಗ್ಗಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.


ಹೈದರಾಬಾದ್ ನ ಎಂ ಎಸ್ ಮಕ್ತಾ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ನಿನ್ನೆಯಿಂದ ಹೈದರಾಬಾದಿನ ಗುಡಿಮಲ್ಕರ್, ರೆಡ್ ಹಿಲ್ಸ್, ನಂಪಲ್ಲಿ, ಸಿನಗರ್ ಕಾಲೊನಿ, ಜುಬಿಲಿ ಹಿಲ್ಸ್, ಕಾರವಾನ್ ಮತ್ತು ಆಸಿಫ್ ನಗರ್ ಪ್ರದೇಶಗಳಲ್ಲಿ 10ರಿಂದ 14 ಸೆಂ ಮೀಟರ್ ನಷ್ಟು ಮಳೆ ಸುರಿದಿದೆ.

ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಹಲವು ಕಡೆಗಳಲ್ಲಿ ಮೊಣಕಾಲವರೆಗೆ ನೀರು ಎತ್ತರಕ್ಕೆ ಬಂದಿದೆ. ಹೈದರಾಬಾದ್ ಬೃಹತ್ ಮಹಾನಗರ ಪಾಲಿಕೆ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತ ತಡೆ ಮತ್ತು ಗಾಳಿ ಮಳೆಗೆ ಧರೆಗುರುಳಿರುವ ಮರಗಳನ್ನು ತೆರವುಗೊಳಿಸುವಂತೆ ಹಿರಿಯ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತ ಡಿ ಎಸ್ ಲೋಕೇಶ್ ಕುಮಾರ್ ಸೂಚಿಸಿದ್ದಾರೆ.


ಹಲವು ಮುಳುಗಡೆ ಪ್ರದೇಶಗಳಿಗೆ ಮೇಯರ್ ಬಿ ರಾಮಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 


ಮುಂದಿನ ಮಾರ್ನಾಲ್ಕು ದಿನಗಳ ಕಾಲ ತೆಲಂಗಾಣದ ಬಹುತೇಕ ಕಡೆ ಹಗುರದಿಂದ ಕೂಡಿದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com