ಅಕಾಲಿಕ ಮಳೆ, ಧೂಳಿನ ಚಂಡಮಾರುತ: ಗುಜರಾತ್ ನಲ್ಲಿ ಕನಿಷ್ಠ 35 ಸಾವು

ಗುಜರಾತ್ ನಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಈ ವರೆಗೂ ಕನಿಷ್ಛ 10 ಮಂದಿ ಸಾವಿಗೀಡಾಗಿದ್ದು, ಹಲವರು...
ಗುಜರಾತ್ ನಲ್ಲಿ ಅಕಾಲಿಕ ಮಳೆಯ ಅವಾಂತರ
ಗುಜರಾತ್ ನಲ್ಲಿ ಅಕಾಲಿಕ ಮಳೆಯ ಅವಾಂತರ
ಅಹ್ಮದಾಬಾದ್: ಗುಜರಾತ್ ನಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಈ ವರೆಗೂ ಕನಿಷ್ಛ 35 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಗುಜರಾತ್ ಮತ್ತು ಸೌರಾಷ್ಟ್ರ ಪ್ರಾಂತ್ಯದಲ್ಲಿ ಕಳೆದ 2 ದಿನಗಳಿಂದ ಸುರಿದ ಅಕಾಲಿಕ ಭಾರಿ ಮಳೆ ಹಾಗೂ ಧೂಳು ಸಹಿತ ಚಂಡಮಾರುತ ಭಾರಿ ಅವಾಂತರವನ್ನೇ ಸೃಷ್ಟಿ ಮಾಡಿದ್ದು, ಈವರೆಗೂ ಸುಮಾರು 35 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಅಂತೆಯೇ ಹಲವರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಇಲಾಖೆಯ ನಿರ್ದೇಶಕ ಜಿಬಿ ಮಂಗ್ಲಪಾರಾ ಹೇಳಿದ್ದಾರೆ.
ಉತ್ತರ ಗುಜರಾತ್ ಭಾಗದಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಸಾವು ಸಂಭವಿಸಿದ್ದು, ಇಲ್ಲಿ ಸಂಭವಿಸಿದ ಭಾರಿ ಗುಡುಗು ಮತ್ತು ಮಿಂಚಿನಿಂದಾಗಿ ಹತ್ತಾರು ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿಸಿವೆ ಎಂದು ತಿಳಿದುಬಂದಿದೆ.
ಅತ್ತ ಉತ್ತರ ಗುಜರಾತ್ ಮಳೆಯಿಂದಾಗಿ ತತ್ತರಿಸಿದ ಸುದ್ದಿ ಬಿತ್ತರವಾಗುತ್ತಲೇ ಪ್ರಧಾನಿ ನರೇಂದ್ರ ಮೋದಿ ಸಂತ್ರಸ್ಥರಿಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಘೋಷಣೆ ಮಾಡಿದ್ದಾರೆ. ಅದರಂತೆ ಸಾವಿಗೀಡಾದವರ ಕುಟುಂಬಕ್ಕೆ ತಲಾ 2 ಲಕ್ಷ  ರೂ ಹಾಗು ಗಾಯಾಳುಗಳಿಗೆ ತಲಾ 50 ಸಾವಿರ ರೂ ಪರಿಹಾರ ಘೋಷಣೆ ಮಾಡಿದ್ದಾರೆ. ಗುಜರಾತ್ ನ ಹಮ್ಮತ್ ಪುರದಲ್ಲಿ ನಡೆದ ರ್ಯಾಲಿ ವೇಳೆಯಲ್ಲೂ ಪ್ರಧಾನಿ ಮೋದಿ ಈ ಕುರಿತು ಘೋಷಣೆ ಮಾಡಿದ್ದರು.
ರಾಹುಲ್ ಗಾಂಧಿ ಸಂತಾಪ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com